ಉ.ಕ ಸುದ್ದಿಜಾಲ ಅಥಣಿ :
ಬಮಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಬಿರೇಶ್ವರ ಜಾತ್ರೆಗೆ ಬಂದಿದ್ದ ಹುಡುಗ ಕುಮಾರ ಸಿದ್ದಪ್ಪ ವಾಗ್ಮೋಡೆ(16) ಕಳೆದ ಎರಡು ದಿನಗಳ ಹಿಂದೆ ಕೃಷ್ಣಾ ನದಿಯಲ್ಲಿ ಈಜು ಬಾರದೆ ಆಕಸ್ಮಿಕವಾಗಿ ಬಿದ್ದು ನದಿಯಲ್ಲಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ, ಇಂದು ಹಲ್ಯಾಳ-ದರೂರ ಬ್ರಿಡ್ಜ್ ಬಳಿ ಹುಡುಗ ಶವವಾಗಿ ಪತ್ತೆಯಾಗಿದ್ದಾನೆ.
ದುರ್ಘಟನೆ ಸಂಭವಿಸಿದ ಕ್ಷಣದಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಸ್.ಡಿ.ಆರ್.ಎಫ್ ಹಾಗೂ ತಾಲೂಕಿನ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿಗಳು ಇದೀಗ ಮೃತದೇಹವನ್ನು ಹೊರತೆಗೆದಿದ್ದಾರೆ.
ಕುಟುಂಬ ನಡೆಸಬೇಕಿದ್ದ ಮಗ ಇಂದು ಮೃತನಾಗಿದ್ದರಿಂದ ನನ್ನ ಕುಟುಂಬ ಮುಂದೆ ಬೀದಿಗೆ ಬರುತ್ತದೆ ದಯವಿಟ್ಟು ಸ್ಥಳೀಯ ಶಾಸಕರುಗಳು ನನ್ನ ಕುಟುಂಬಕ್ಕೆ ಸಹಾಯ ನೀಡಬೇಕೆಂದು ಬಾಲಕನ ತಂದೆ ಅಳಲು ತೋಡಿಕೊಂಡರು.
ಈ ರಕ್ಷಣಾ ಕಾರ್ಯಚರಣೆಯಲ್ಲಿ ಅಥಣಿ ತಾಲೂಕಿನ ಅಗ್ನಿಶಾಮಕ ಸಿಬ್ಬಂದಿಗಳಾದ ರಾಜು ತಳವಾರ, ಅನಿಲ್ ಬಡಚಿ, ನೀಲಪ್ಪ ಹಿರವಾಡೆ, ಸುರೇಶ್ ಮಾದರ, ಶಿವಾನಂದ್ ಶಿರಹಟ್ಟಿ, ಶಿವಯ್ಯ ಮಠಪತಿ ಭಾಗಿಯಾಗಿದ್ದರು.