ಉ.ಕ ಸುದ್ದಿಜಾಲ ಚಿಕ್ಕೋಡಿ :
ಹಾಡಹಗಲೇ ಯಾರೂ ಇಲ್ಲದ ಮನೆ ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್, ಒಬ್ಬ ನೇಪಾಳಿ ಸೇರಿ ಮೂವರನ್ನು ಬಂಧಿಸಿದ ಚಿಕ್ಕೋಡಿ ಪೊಲೀಸರು, ಬಂಧಿತರಿಂದ ೧೫. ೬೪ ಲಕ್ಷ ಮೌಲ್ಯದ ಬಂಗಾರದ ಅಭರಣ ವಶ.
ಎಣ್ಣೆ ಏಟಲ್ಲಿ ಮನೆ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ ಖದೀಮರ ಚಿಕ್ಕೋಡಿ ಪೋಲಿಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ನಿವಾಸಿ ವಿಷ್ಣುಪ್ರಕಾಶ ನೇತಲಕರ್ ಎಂಬುವವರ ಮನೆಗೆ ಕನ್ನ ಹಾಕಿದ್ದ ಖದೀಮರು, ಈ ಸಂಬಂಧ ಇದೇ ತಿಂಗಳ ೧೨ ರಂದು ಚಿಕ್ಕೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದ ವಿಷ್ಣುಪ್ರಕಾಶ.
ವಿಷ್ಣು ಪ್ರಕಾಶ ಮನೆಯಲ್ಲಿನ ೩೭೦/ಗ್ರಾಂ ಬಂಗಾರ, ೧.೫೦ ಲಕ್ಷ ಹಣ ದೋಚಿದ್ದ ಖದೀಮರು, ಪ್ರಕರಣ ಬೆನ್ನತ್ತಿದ್ದ ಪೊಲೀಸರಿಂದ ತನಿಖೆ ನಡೆಸಿ ಆರೋಪಿಗಳ ಬಂಧಿಸಲಾಗಿದ್ದು, ವಿಶಾಲ ಶರ್ಮ( ನೇಪಾಳಿ) ವಿಜಯಪುರ ನಿವಾಸಿ ಗಜಾನನ ಕಾಂಬಳೆ, ಸಂಜು ಬೈಲಾಪತ್ತಾರ್ ಬಂಧಿತರು. ಎಣ್ಣೆ ಹೊಡೆದ ಮತ್ತಲ್ಲಿ ಕಂಡೋರ ಮನೆಗೆ ಕನ್ನ ಹಾಕುತ್ತಿದ್ದ ಖಮದೀರು.

ಬಂಧಿತರಿಂದ ೧ ಕೆಟಿಎಂ ಬೈಕ್ ೧ ಕೆನಾನ್ ಕ್ಯಾಮರಾ ಸೇರಿದಂತೆ ಆಭರಣಗಳು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕುರಿತು ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.