ಉ.ಕ ಸುದ್ದಿಜಾಲ ಧಾರವಾಡ :

ವಿಧಾನಸಭಾ ಚುನಾವಣೆಗೆ ಸ್ಪರ್ದಿಸಲು ಪ್ರಮೋದ್ ಮುತಾಲಿಕ್ ತೀರ್ಮಾನ ಕೊನೆಯ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ ಧಾರವಾಡದಲ್ಲಿ‌ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಾರಿ ಚುನಾವಣೆ ಸ್ಪರ್ಧೆ ಮಾಡೋ ತೀರ್ಮಾನ ಮಾಡಿದ್ದೇನೆ ಅದು ಎಲ್ಲಿಂದ ಅನ್ನೋದು ಇನ್ನು ನಿರ್ಧಾರ ಆಗಿಲ್ಲ. ಎಲ್ಲ ಕಡೆಯಿಂದಲೂ ಅಲ್ಲಿನ ಕಾರ್ಯಕರ್ತರಿಂದ ಒತ್ತಡ ಹೆಚ್ಚಿದೆ.

ರಾಜ್ಯದ ಎಲ್ಲ ಪ್ರಮುಖರ ಜೊತೆ ಚರ್ಚೆಸಿ ಡಿಸೆಂಬರ್ ಮೊದಲ ವಾರದಲ್ಲೇ ಕ್ಷೇತ್ರದ ಆಯ್ಕೆ ಮಾಡಲಾಗುತ್ತೆ ಬಿಜೆಪಿ ನನಗೆ ಟಿಕೆಟ್ ಕೊಡುವ ಸ್ಥಿತಿಯಲ್ಲಿ ಇಲ್ಲ. ಇಲ್ಲಿಯವರೆಗೆ ಯಾವುದೇ ಸಂಪರ್ಕ ಮಾಡಿಲ್ಲ, ಮಾಡೋದು ಇಲ್ಲ.

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ

ಬಿಜೆಪಿ ಮಾನಸಿಕತೆಯನ್ನ ನಾನು ಅರ್ಥ ಮಾಡಿಕೊಂಡಿದ್ದೇನೆ. ನನ್ನಂಥವರಿಗೆ ಬಿಜೆಪಿ ಟಿಕೆಟ್ ಕೊಡುವುದಿಲ್ಲ ಸ್ವಾತಂತ್ರ್ಯವಾಗಿಯೇ ಸ್ಪರ್ಧೆ ಮಾಡೋ ನಿರ್ಧಾರವನ್ನ ನಾನು ಮಾಡಿದ್ದೇನೆ. ಬಿಜೆಪಿಯಲ್ಲಿ ಕಾಂಗ್ರೆಸ್ ನವರೆ ಸೇರಿಕೊಂಡಿದ್ದಾರೆ.

ಹಿಂದುತ್ವ ಅವರಿಗೆ ಬೇಡವಾಗಿದೆ ಹೀಗಾಗಿ ಅವರು ಟಿಕೆಟ್ ಕೊಡಲ್ಲ ಕಾಂಗ್ರೆಸ್ ಹಾಗೂ ಇನ್ನುಳಿದ ಪಕ್ಷದವರು ಟಿಕೆಟ್ ಕೊಟ್ಟರೆ ನಾನು ಸ್ವೀಕಾರ ಮಾಡೋಲ್ಲ. ಒಂದು ವೇಳೆ ಆರಿಸಿ ಬಂದರೆ ಹಿಂದುತ್ವದ ಸಿದ್ಧಾಂತದ ಮೇಲೆ ಬಿಜೆಪಿಗೆ ಬೆಂಬಲ ನೀಡುತ್ತೇನೆ.

ಉಡುಪಿ, ಪುತ್ತೂರು, ಕಾರ್ಕಳ, ತೆರದಾಳ, ಧಾರವಾಡ ಸೇರಿದಂತೆ ಶೃಂಗೇರಿ ಸಹ ನಿಲ್ಲಬಹುದು 8 ರಿಂದ 10 ಕ್ಷೇತ್ರಗಳು ಇದ್ದಾವೇ ಅದರಲ್ಲಿ ಒಂದನ್ನು ಆಯ್ಕೆ ಮಾಡಲಾಗುತ್ತೆ ಎಂದು ಹೇಳಿದರು.