ಉ.ಕ‌ ಸುದ್ದಿಜಾಲ ಹುಕ್ಕೇರಿ :

ಗಡಿನಾಡು ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಹಿನ್ನಲೆ. 50 ಸಾವಿರ ಜನರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಹುಕ್ಕೇರಿ ಸ್ವಾಮೀಜಿ ರಾಜ್ಯೋತ್ಸವಕ್ಕೆ ಬರುವ ಕನ್ನಡಿಗರಿಗೆ ಹುಕ್ಕೇರಿ ಶ್ರೀಗಳಿಂದ ಹೋಳಿಗೆ ಊಟ.

ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ. ಹೋಳಿಗೆ ಜೊತೆಗೆ ಊಟದಲ್ಲಿ ಬದನೆಕಾಯಿ ಪಲ್ಯ, ಅನ್ನ-ಸಾಂಬಾರು. 150 ಜನ ಅಡುಗೆ ಸಿಬ್ಬಂದಿಯಿಂದ 1 ಲಕ್ಷ ಹೋಳಿಗೆ ತಯಾರಿ ಮಾಡಲಾಗಿದೆ.

ಇನ್ನು 50 ಜನ ಅಡುಗೆ ಸಿಬ್ಬಂದಿಯಿಂದ ಅನ್ನ ಸಾಂಬಾರ್, ಬದನೆಕಾಯಿ ಪಲ್ಯ ತಯಾರಿ. ಜಿಲ್ಲಾ ಉಸ್ತವಾರಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಜಿಲ್ಲೆಯ ಸಂಸದರು ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಜಿಲ್ಲಾಧಿಕಾರಿ ಸೇರಿ ಜಿಲ್ಲೆಯ ಎಲ್ಲ ಅಧಿಕಾರಿಗಳು ಹುಕ್ಕೇರಿ ಹಿರೇಮಠಕ್ಕೆ ಸಹಕಾರ ನೀಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ನಟ ಸಾಯಿಕುಮಾರ್ ಭಾಗಿಯಾಗಲಿದ್ದಾರೆ. ಬೆಳಗಾವಿಯ ಸರ್ದಾರ್ ‌ಮೈದಾನದಲ್ಲಿ ಮಧ್ಯಾಹ್ನ 12.30ಕ್ಕೆ ಹೋಳಿಗೆ ಊಟ ವಿತರಣೆಗೆ ಚಾಲನೆ ನೀಡಲಾಗುವುದು.

ಉತ್ತರ ಕರ್ನಾಟಕ ಭಾಗದಲ್ಲೇ ಅದ್ಧೂರಿ ರಾಜ್ಯೋತ್ಸವ ನಡೆಯುವುದೇ ಬೆಳಗಾವಿಯಲ್ಲಿ. ಬೆಳಗಾವಿಯಲ್ಲಿ ನಡೆಯುವ ರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಬೇಕು. ಕನ್ನಡ ಉಳಿಯಬೇಕು ಅಂದ್ರೇ ಕನ್ನಡಕ್ಕೆ ಆರ್ಥಿಕ ಸಹಾಯ ಅವಶ್ಯಕತೆ ಇದೆ ಎಂದರು.

ಹೆಚ್ಚಿನ ಅನುದಾನ ಬಿಡುಗಡೆ ಆದ್ರೆ ರಾಜ್ಯೋತ್ಸವ ಆಚರಣೆಗೆ ಉತ್ಸಾಹವೂ ವೃದ್ಧಿಯಾಗುತ್ತದೆ. ಹುಕ್ಕೇರಿ ತಾಲೂಕಿನ ಯಮಕನಮರಡಿಯ 200 ಬಾಣಸಿಗರಿಂದ ಅಡುಗೆ ಸಿದ್ಧತೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬೆಲ್ಲ, ಗದಗ ಜಿಲ್ಲೆಯ ಕಡಲೆಬೇಳೆ.

ಬೆಳಗಾವಿ ಜಿಲ್ಲೆಯ ಅಡುಗೆ ಎಣ್ಣೆ, ಗುಜರಾತ್‌ ರಾಜ್ಯದ ಗೋಧಿ ಹಿಟ್ಟು, ದಾವಣಗೆರೆಯ ಅಕ್ಕಿ. ಶಿವಮೊಗ್ಗದ 50 ಸಾವಿರಕ್ಕೂ ಅಧಿಕ ಅಡಕಿ ಎಲೆಯನ್ನು ಸರಬರಾಜು ಮಾಡಿಕೊಳ್ಳಲಾಗುತ್ತಿದೆ ಎಂದು ಬೆಳಗಾವಿ ಶಾಖಾ ಮಠದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.