ಉ.ಕ ಸುದ್ದಿಜಾಲ ಬಾಗಲಕೋಟೆ :
ಚಲಿಸುತ್ತಿದ್ದ ಬಸ್ ನಲ್ಲಿ ಇಬ್ಬರು ಕುಡುಕರ ನಡುವೆ ಗಲಾಟೆ, ಗಲಾಟೆ ತೀವ್ರಗೊಂಡು ಬಸ್ ಚಲಿಸುತ್ತಿರುವಾಗಲೆ ಒದ್ದ ಪರಿಣಾಮ ಬಸ್ ನಿಂದ ಬಿದ್ದು ಓರ್ವ ವ್ಯಕ್ತಿ ಸಾವನಪ್ಪಿದ್ದಾನೆ.
ಚರಂಡಿಯಲ್ಲಿ ಬಿದ್ದ ವ್ಯಕ್ತಿಯ ಶವ ಜೆಸಿಬಿ ಮೂಲಕ ಹೊರಕ್ಕೆ ತೆಗೆಯಲಾಗಿದೆ. ಮುಧೋಳ – ಕುಳಲಿ ರಸ್ತೆಯಲ್ಲಿ ನಡೆದ ಘಟನೆ ಇದಾಗಿದ್ದು, ಪ್ರಹ್ಲಾದ ಮುರಿಗೆಪ್ಪ ಮಾದರ (38) ಮೃತ ವ್ಯಕ್ತಿ.
ಬಾಗಲಕೋಟೆ ಜಿಲ್ಲೆ ಮುಧೋಳ ಹೊರವಲಯದಲ್ಲಿ ಈ ಘಟನೆ ನಡರದಿದೆ. ಮುಧೋಳ ತಾಲ್ಲೂಕಿನ ಸೋರಗಾವಿ ಗ್ರಾಮದ ನಿವಾಸಿಪ್ರಹ್ಲಾದ ಮುರಿಗೆಪ್ಪ ಮಾದರ (38) ಮೃತ ವ್ಯಕ್ತಿ.
ಮುಧೋಳ ಮೂಲಕ ಬನಹಟ್ಟಿಗೆ ಹೊರಟಿದ್ದ ಬಸ್ ಬಸ್‌ನಲ್ಲಿ ಇಬ್ಬರು ಕುಡುಕರಿಂದ ಗಲಾಟೆ ನಡೆದಿದೆ. ಓರ್ವ ಕುಡುಕನನ್ನು ಬಸ್ ನಿಂದ ಹೊರ ತಳ್ಳಿದ ಮತ್ತೊಬ್ಬ ಕುಡುಕ ಚಲಿಸುತ್ತಿದ್ದ ಬಸ್ ನಿಂದ ರಸ್ತೆ ಪಕ್ಕದ ಚರಂಡಿಗೆ ಬಿದ್ದ ವ್ಯಕ್ತಿ
ಚರಂಡಿಯಲ್ಲಿ ಬಿದ್ದು ಅಸುನೀಗಿದ ವ್ಯಕ್ತಿ ಸ್ಥಳಕ್ಕೆ ಮುಧೋಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ಬಳಸಿ ಶವ ಹೊರಕ್ಕೆ ತೆಗೆಯಲಾಗಿದೆ.