ಉ.ಕ ಸುದ್ದಿಜಾಲ ಯಮಕನಮರಡಿ :

ಸತೀಶ ಜಾರಕಿಹೋಳಿ ಹೆಲಿಕ್ಯಾಪ್ಟರ ಬಗ್ಗೆ ಯತ್ನಾಳ ಹೇಳಿದ್ದೇನು?, ಗೋಕಾಕ‌ ಬಂದ ನೋಡೊ ಅಂತ ನಂಗ್ ಚಾಲೇಂಜ್ ಮಾಡಿದ್ರು, ಗೋಕಾಕ ಹೋದ್ವಿ, ಎಲ್ಲೆಲ್ಲಿ ಇವರ ಒಳ ಒಪ್ಪಂದಗಳು, ಅಕಾಡೆನೂ ಇವರ ಅದಾರು ಇಕಡೆನೂ ಅವರ ಅದಾರು ಎಂದ ಗೋಕಾಕ ಶಾಸಕ ಬಸನಗೌಡ ಯತ್ನಾಳ,

ಬೆಳಗಟವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ‌ ಮತಕ್ಷೇತ್ರದ ಹೆಬ್ಬಾಳ ಗ್ರಾಮದಲ್ಲಿ ಆಯೋಜಿಸಿದ ವಿಜಯ ಸಂಕಲ್ಪ ಸಮಾವೇಶ ಉದ್ದೇಶಿಸಿ ಶಾಸಕ ಬಸನಗೌಡ ಪಾಟೀಲ್ ಭಾಷಣ, ಜಾರಕಿಹೊಳಿ ಸಹೋದರರಿಗೆ ಟಾಂಗ್ ನೀಡಿದ ಯತ್ನಾಳ.

ನಾನು ಯಮಕನಮರಡಿಗೆ ಬಂದು ಹೋದ ಮೇಲೆ ಆಗಾಗ ಹೆಲಿಕಾಪ್ಟರ್ ವಿಜಯಪುರಕ್ಕೆ ಬರುತ್ತಿದೆ, ವಾಲ್ಮೀಕಿ ಸಮುದಾಯದ ಮೀಸಲಾತಿ ಬಗ್ಗೆ ಒಂದು ಬಾರಿಯಾದ್ರೂ ಮಾತಾಡಿದ್ದಾರಾ ಸತೀಶ್ ಚೈನಿ(ಮೋಜು) ಮಾಡಲಿಕ್ಕೆ ವಿಧಾನಸೌದಕ್ಕೆ ಬರ್ತಾರೆ ಎಂದ ಯತ್ನಾಳ, ಸಿದ್ದರಾಮಯ್ಯಗೂ ಸಹ ಸತೀಶ್ ಜಾರಕಿಹೊಳಿಗೆ ಆರಿಸಿ ಬರೋದು ಇಷ್ಟ ಇಲ್ಲ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಹರಿಹಾಯ್ದ ಯತ್ನಾಳ.

ಒಂದು ದಿನವೂ ಸಹ ಮೀಸಲಾತಿ ಬಗ್ಗೆ ಮಾತನಾಡದವರು ಸುಡಗಾಡದಲ್ಲಿ ಹೋಗಿ ಕಾರ್ ಪೂಜೆ ಮಾಡ್ತಾರೆ, ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೊ ಹಾಕಿಕೊಂಡು ಓಡಾಡ್ತಾರೆ, ಹಿಂದೂ ಅಂದ್ರೆ ಇವರಿಗೆ ನಾಚಿಕೆ ಆಗುತ್ತೆ ಅಂತಾರೆ,

ಸಾಬರ್ ಓಟ್ ಸಲುವಾಗಿ ನೀವು ಹಿಂದುತ್ವದ ವಿರುದ್ದ ಮಾತಾಡ್ತಿರಿ, ಈ ಸಲ 11 ರೂಪಾಯಿ ಪಟ್ಟಿ ಹಾಕಿ ನಿಮ್ಮನ್ನ ಕೆಡವುತ್ತೆವೆ, 11 ರೂಪಾಯಿ ಪಟ್ಟಿ ಕೊಡಲಿಕ್ಕೆ ಆಗದವರು ಅಲ್ಲ ನಾವು ನಾವು ಪಟ್ಟಿ ಹಾಕಿಯೇ ನಿಮ್ಮನ್ನ ಕೆಡವುತ್ತೆವೆ,

ಇಂಗ್ಲೆಂಡ್ ನಲ್ಲಿ ಹೋಗಿ ರಾಹುಲ್ ಗಾಂಧೀ ಪ್ರಜಾಪ್ರಭುತ್ವ ಉಳಿಸಿ ಅಂತ ಹೇಳ್ತಾರೆ, ಇವರೇನಾದರೂ ದೇಶಭಕ್ತರಾ ಇವರು ಎಂದಾದರೂ ಭಾರತ್ ಮಾತಾಕೀ ಜೈ ಅಂದಿದಾರಾ??, ರಾಹುಲ್ ಗಾಂಧೀಗೆ ಜೈ, ಇಂದಿರಾ ಗಾಂಧೀಗೆ ಜೈ, ಅವರಿಗೆ ಹುಟ್ಟಿದವರಿಗೆ ಜೈ, ಅವರ‌ ಮನೆಯಲ್ಲಿನ ಬೆಕ್ಕಿ ಮರಿಗೆ ಜೈ, ನಾಯಿ ಮರಿಗೆ ಜೈ ಅಂತ ಹೇಳ್ತಾರೆ.

ಸ್ಮಶಾನಕ್ಕೆ ಹೋಗಿ ಬಂದ ಮೇಲೆ ಸ್ನಾನ ಮಾಡೋದು ಸಂಸ್ಕೃತಿ, ರಾತ್ರಿ ಮನೆಯಿಂದ ಕಸ ಎಸಿಯಬಾರದು ಎಂದು ಹೇಳೋದು ಬೇರೆಯದಕ್ಕೆ, ರಾತ್ರಿ ಮೈಮೆಲೆ ಹಾಕಿಕೊಂಡ ಬಂಗಾರ ಕಳಚಿ ಬಿದ್ದರೆ ಕಸದೊಂದಿಗೆ ಅದು ಹೊರ ಹೋಗಬಾರದು ಎಂದು ಹಾಗೆ ಪದ್ದತಿ ಮಾಡಿದ್ದಾರೆ,

ಕಾಂಗ್ರೇಸ್ ಪಾರ್ಟಿ ಸತ್ಯಾನಾಸ್ ಮಾಡೋಕೆ ಖರ್ಗೆಯರಿಗೆ ಅಧ್ಯಕ್ಷ ಸ್ಥಾನ‌ ನೀಡಲಾಗಿದೆ. ಹಾಳೂರಿಗೆ ಉಳಿದೋನೆ ಗೌಡ ಎಂಬಂತೆ ಅಧ್ಯಕ್ಷ ಖರ್ಗೆ ಅವರ ಪರಿಸ್ಥಿತಿ ಆಗಿದೆ, ಸಿದ್ದರಾಮಯ್ಯ ಹೇಳ್ತಾರೆ 200 ಯೂನಿಟ್ ಪ್ರೀ ವಿದ್ಯುತ್ ಕೊಡ್ತಿನಿ ಅಂತಾರೆ, ಅವರ ಅರೇ ಹುಚ್ಚ 2000 ಸಾವಿರ ಯುನಿಟ್ ಅಂತಾನೆ ಬಟಾಟಿಯಿಂದ ಬಂಗಾರ ಮಾಡ್ತಾನಂತ.

ಅಮೇರಿಕದಲ್ಲಿ ರಾಹುಲ್‌ ಗಾಂಧೀ ಡ್ರಗ್ ಕೇಸ್ ನಲ್ಲಿ ಸಿಕ್ಕಿದ್ದ, ಅಲ್ಲಿ ಅರೆಸ್ಟ್ ಆಗಿದ್ದ ವಾಜಪೇಯಿಯವರ ದೊಡ್ಡ ಗುಣ ರಾಹುಲ್ ಗಾಂಧೀಯನ್ನ‌ ಹೊರಗೆ ತಂದ್ರು, ನಮ್ಮ ದೇಶದ ಮಾನ ಮಾರ್ಯಾದೆ ಹಾಳಾಗಬಾರದು ಅಂತ ಅಟಲ್‌ ಬಿಹಾರಿ ವಾಜಪೇಯ್ ಹಾಗೆ ಮಾಡಿದ್ರು, ಇವರು ಮಹಾತ್ಮ ಗಾಂಧೀಗೆ ಎನೂ ಸಂಬಂಧವೇ ಇಲ್ಲ ಇವರು ಗಾಂಧೀ ಅಂತ ಹೇಗೆ ಇಟ್ಕೊಂಡ್ರೋ ಗೊತ್ತಿಲ್ಲ,

ಯಾರಿಗೂ ಹೆದರಬೇಡಿ ನೀವೇನೂ ಯುದ್ಧ ಮಾಡಲಿಕ್ಕೆ ಹೊರಟಿಲ್ಲ, ಕೇವಲ ಮತದಾನದ ದಿನ ಮತಕೇಂದ್ರಕ್ಕೆ ಹೋಗಿ ಬಟನ್ ಒತ್ತಿ ಎಂದ ಯತ್ನಾಳ, ಹೊರಗೆ ಬಂದು ಕಾಂಗ್ರೇಸ್ ನವರು ನಿಂತಿದ್ದರೆ ನಿಮಗೆ ಮತ ಹಾಕಿದಿವಿ ಅಂತ ಹೇಳಿ, ಕೈ ಸಣ್ಣೆಯ ಮೂಲಕ ಗೂಟ ಇಟ್ಟಿನಿ ಅಂತ ಹೇಳಿದ ಯತ್ನಾಳ,

ಅವರು ಹಣ ಕೊಟ್ಟರೆ ತೆಗೆದುಕೊಳ್ಳಿ ಯಾರಪ್ಪನ ಮನೆ ದುಡ್ಡಲ್ಲ ಅದು ನಿಮ್ಮದೆ ದುಡ್ಡು, ನಾನು ಮೊದಲು ಎಂ ಎಲ್ ಎ ಆದಾಗ ಎಲ್ ಹೆಚ್ ನಲ್ಲಿ ಎಂ ಎಲ್ ಎ ಗಳು ಇಸ್ಪೀಡ್ ಆಡ್ತಾ ಕೂರ್ತಿದ್ರು, ಎಲ್ ಹೆಚ್ ನಲ್ಲಿ ಕುಡಿಯೋದು, ಇಸ್ಪೀಟ್ ಆಡೋದು ಮಾಡ್ತಿದ್ರು‌ ಸದನದಕ್ಕೆ ಬರ್ತಿರಿಲ್ಲ, ಯಾರಿಗೂ ಅಂಜುವುದು ಬೇಡ, ಪರ್ವಕಾಲ ಬಂದಿದೆ,.

ಕಡೆಯ ಎರಡು ದಿನಗಳ ಇರುವಾಗ ಒಪ್ಪಂದ ಮಾಡ್ಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ ಉತ್ನಾಳ, ಈ ಸಲ ಬೆಳಗಾವಿಯಲ್ಲಿ 18 ಕ್ಕೆ 18 ಸ್ಥಾನವನ್ನು ಬೆಳಗಾವಿಯಲ್ಲಿ ಗೆಲ್ಲುತ್ತೆವೆ ಎಂದ ಯತ್ನಾಳ.

ಸಿದ್ದರಾಮಯ್ಯರಂತೆ ಮಿಮಿಕ್ರಿ ಮಾಡಿದ ಯತ್ನಾಳ, 10 ಕೆಜಿ ಅಕ್ಕಿ, ಬೇಕಾ ಬೇಡ್ವಾ ಎಂದು ಸಿದ್ದರಾಮಯ್ಯರಂತೆ ಮುಖ ಕಿವಿಚಿದ ಯತ್ನಾಳ, ಭಾಷಣದ ಮಧ್ಯೆ ಶಾಸಕ ಜಮೀರ್ ಅಹಮ್ಮದ್ ವಿರುದ್ಧ ಏಕವಚನದಲ್ಲಿ ಹರಿಹಾಯ್ದ ಯತ್ನಾಳ,

ಹಿಂದೂಗಳನ್ನ ಕತ್ತರಿಸ್ತಿನಿ ಅಂತ ಜಮೀರ್ ಹೇಳ್ತಾರೆ, ಮಗನೇ ಅದೇನು ಕೋಳಿ ಕಾಲಾ ಕಚ ಕಚ ಕಚ ಕಟ್ ಮಾಡಾಕಾ? ಎಂದು ಏಕವಚನದಲ್ಲಿಯೇ ಹರಿಹಾಯ್ದರು. ಗಟ್ಟಿಯಾಗಿ ನಿಂತು ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸಿ ಎಂದ ಬಸನಗೌಡ ಯತ್ನಾಳ.