ಉ.ಕ‌ ಸುದ್ದಿಜಾಲ‌‌ ಅಥಣಿ :

ದೀರ್ಘ ದಂಡ ನಮಸ್ಕಾರ ಸಲ್ಲಿಸುವಾಗ ಅಪಘಾತ ಯುವತಿ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ.

ತಲೆಮೇಲೆ ಕಾರಿನ ಚಕ್ರ ಹರಿದು ಸ್ಥಳಕ್ಕೆ ಭಕ್ತೆ ಸಾವಿಗಿಡಾಗಿದ್ದಾಳೆ ಐಶ್ವರ್ಯ ನಾಯಿಕ (22) ಮೃತ ದುರ್ದೈವಿ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದ ನಿವಾಸಿ. ತೀರ್ಥ ಗ್ರಾಮದ ಜಾತ್ರೆ ಹಿನ್ನೆಲೆ ದೇವರಿಗೆ ದೀಡ ನಮಸ್ಕಾರ ಸಲ್ಲಿಸುವ ವೇಳೆ ಅಪಘಾತ.

ಕೃಷ್ಣಾ ನದಿಯಿಂದ ದೇವಸ್ಥಾನವರಿಗೆ ದೀಡ ನಮಸ್ಕಾರ ಹಾಕುತ್ತಾ ಬರುತ್ತಿರುವ ಯುವತಿ. ನಮಸ್ಕಾರ ಸಲ್ಲಿಸುವ ಸಮಯದಲ್ಲಿ ಕಾರು ಅಪಘಾತ. ಸ್ಥಳಕ್ಕೆ ಯುವತಿ ದುರ್ಮರಣ. ಕಾರು ಚಾಲಕನನ್ನು ಬಂಧಿಸಿದ ಅಥಣಿ ಪೊಲೀಸರು. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.