ಉ.ಕ ಸುದ್ದಿಜಾಲ ಬೆಳಗಾವಿ :

ಸುರ್ಣ ಸೌಧ ಹೊರವಲಯದ ಪ್ರತಿಭಟನಾ ಸ್ಥಳ ಬಸ್ತವಾಡದಲ್ಲಿ ಇಂದು ಹಿಂದುತ್ವನಿಷ್ಠ ಸಂಘಟನೆ ಮತ್ತು ಸಂಪ್ರದಾಯಗಳ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ ನಡೆಯಿತು.

ಲವ್ ಜಿಹಾದ್ ತಡೆಯಲು ಕೇಂದ್ರ ಮತ್ತು ರಾಜ್ಯಮಟ್ಟದಲ್ಲಿ ವಿಶೇಷ ಪೋಲಿಸ್ ಪಡೆ ಸ್ಥಾಪನೆಗಾಗಿ ಆಗ್ರಹಿಸಿದ ಪ್ರತಿಭಟನಾಕಾರರು ಮಹಿಳೆಯರ ಅಪಹರಣ ಮತ್ತು ಮತಾಂತರ ತಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದರು

ಹಲಾಲ್ ಪ್ರಮಾಣ ಪತ್ರದಿಂದ ಸಾವಿರಾರು ಕೋಟಿ ರೂಪಾಯಿ ಸಂಗ್ರಹ ಮಾಡಿ ಭಯೊತ್ಪಾದನೆಗೆ ಬಳಸಿದ ಬಗ್ಗೆ  ತನಿಖೆ ನಡೆಸಬೇಕು ಹಾಗೂ ಅಂತರ್ಧರ್ಮೀಯ ವಿವಾಹವನ್ನು  ನ್ಯಾಯಾಲಯದಲ್ಲಿ ದಾಖಲಿಸಿ ಲವ್ ಜಿಹಾದ್ ತನಿಖೆ ನಡೆಸಬೇಕೆಂಬ ಪ್ರಮುಖ ಅಹವಾಲನ್ನು ಸರ್ಕಾರಕ್ಕೆ ಸಲ್ಲಿಸಿದರು.

ಈ ವೇಳೆ ಹಿಂದೂ ಜಾಗರಣ ವೇದಿಕೆಯ ಮೋಹನ ಗೌಡ ಮಾತನಾಡಿ ಎಲ್ಲ ಹಿಂದೂಪರ ಸಂಘಟನೆಯಿಂದ ಪ್ರಮುಖವಾಗಿ ಎರಡು ಬೇಡಿಕೆ ಇಡುತ್ತಿದ್ದೇವೆ ಯುಪಿ ಮಾದರಿಯಲ್ಲಿ ಲವ್ ಜಿಹಾದ್  ಮತಾಂತರ ತಡಗೆ ಆಗ್ರಹಿಸಿ ಪ್ರತಿಭಟನೆ ಶಾಹಿನ್ ಗ್ಯಾಂಗ್ ಲವ್ ಜಿಹಾದ ಮಾಡುತ್ತಿದೆ 2014 ರಿಂದ ಇಪ್ಪತೊಂದರ ವರೆಗೆ ಸುಮಾರು ಇಪ್ಪತ್ತೊಂದು ಸಾವಿರ ಯುವತಿಯರು ಲವ್ ಜಿಹಾದ್ ಗೆ ಒಳಗಾಗಿದ್ದಾರೆ.

ಹಲಾಲ್ ಪ್ರಮಾಣಪತ್ರ ನಿಷೇಧ ಮಾಡಬೇಕು. ಎನ್ ರವಿ ಕುಮಾರ ಶಾಸನ ಮಂಡನೆ ಮಾಡಲಿದ್ದಾರೆ. ಜಮೈತ್ ಉಲೆಮಾ ದಲ್ಲಿ ಸಾವಿರಾರು ಕೋಟಿ ಹಣ ಕೊಳೆಯುತ್ತಿದೆ ಅದನ್ನು ಭಯೋತ್ಪಾದಕ ಚಟುವಟಿಕೆಗೆ ಬಳಸುತ್ತಿದ್ದಾರೆ ಈ ಬಗ್ಗೆ ತನಿಖೆ ಆಗಬೇಕು ಹಲಾಲ್ ಪ್ರಮಾಣ ಪತ್ರ ನಿಷೇದಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ತುಳಜಾ ಭವಾನಿ ಸಂಘಟನೆಯ ಸುಮಂಗಲಾ ಕನೇರಿ  ಹಿಂದೂ ಮಹಿಳೆಯರ ರಕ್ಷಣೆಗೆ ಪೋಷಕರು ಎಚ್ಚರಗೊಳ್ಳಬೇಕು.ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾನೂನು ರಚಿಸಬೇಕು.

ಗುರುಕುಲ ಮನೆಯಿಂದ ಆರಂಭವಾಗಬೇಕು ಹಿಂದುತ್ವದ ಪಾಠ ಆಗಬೇಕು ಪೋಲಿಸರಿಗೆ ವಿಶೇಷ ಮನವಿ ಮಾಡುತ್ತೇವೆ ಲವ್ ಜಿಹಾದ ತನಿಖೆ ಪ್ರಾಮಾಣಿಕವಾಗಿ ನಡೆಯಬೇಕು.ಹಲಾಲ್ ಪ್ರಮಾಣ ಪತ್ರ ನಿಲ್ಲಿಸಬೇಕು.ಇದು ಬೊಮ್ಮಾಯಿ ಸರ್ಕಾರಕ್ಕೆ ನಮ್ಮ ಆಗ್ರಹವಾಗಿದೆ.