ಉ.ಕ ಸುದ್ದಿಜಾಲ ಗೋಕಾಕ :
ವಿಧವೆ ಮೇಲಿನ ಮೋಹಕ್ಕೆ ಇಲಿ ಪಾಷಾಣ ಕುಡಿಸಿ ಪತ್ನಿಗೆ ಚಟ್ಟಕಟ್ಟಿದ ಪತಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದಲ್ಲಿ ಹೃದಯವಿದ್ರಾವಕ ಕೃತ್ಯ. ಶಿಂದಿಕುರಬೇಟ ಗ್ರಾಮದ ಸಕ್ಕುಬಾಯಿ ಪಟಾಯತ್ ಪತಿಯಿಂದ ಕೊಲೆಯಾದ ಮಹಿಳೆ.
ಸಕ್ಕುಬಾಯಿ ಗಂಡ ಸಂತೋಷ ಪಟಾಯತ್ ಎಂಬಾತನೇ ಕೊಲೆ ಆರೋಪಿ. ಅಧಿಕ ಮಾಸವಿದೆ ಎಂದು ಪತ್ನಿ ಜೊತೆಗೆ ಚಾಮುಂಡೇಶ್ವರಿ ದೇಗುಲಕ್ಕೆ ಹೋಗಿದ್ದ ಸಂತೋಷ. ಬೈಲಹೊಂಗಲ ತಾಲೂಕಿನ ಮರುಕುಂಬಿ ಗ್ರಾಮದಲ್ಲಿರುವ ಚಾಮುಂಡೇಶ್ವರಿ ದೇಗುಲ. ಮರಳಿ ಬರುವಾಗ ತಂಪುಪಾನೀಯಾದಲ್ಲಿ ಇಲಿ ಪಾಷಾಣ, ಬಳೆ ಚೂರು ಬೆರಸಿದ್ದ ಆಸಾಮಿ.
ದೇವಿ ಪ್ರಸಾದ ಇದೆ ವಿಷವಿದ್ದ ತಂಪುಪಾನೀಯ ಪತ್ನಿಗೆ ಕುಡಿಸಿದ್ದ ನೀಚ. ಪ್ರಜ್ಞೆ ತಪ್ಪುತಿದ್ದಂತೆ ನಡುರಸ್ತೆ ಮೇಲೆ ಸಕ್ಕುಬಾಯಿ ಕತ್ತುಹಿಸುಕಿ ಕೊಲೆಗೈದ ಕಿರಾತಕ ಗಂಡ. ಕೊಲೆಯನ್ನೇ ಅಪಘಾತ ಎಂದು ಬಿಂಬಿಸಲು ಬೈಕ್ನ್ನೇ ಪತ್ನಿ ಮೇಲೆ ಎತ್ತಿಹಾಕಿದ್ದ ಆಸಾಮಿ.
ತಾನೂ ಎರಡ್ಮೂರು ಗಂಟೆಗಳ ಕಾಲ ರಸ್ತೆ ಪಕ್ಕವೇ ಬಿದ್ದು ಹೈಡ್ರಾಮಾ ಮಾಡಿದ್ದ ಆಸಾಮಿ. ಯಾರೂ ಗಮನಿಸದೇ ಇದ್ದಾಗ ತಾನೇ ಪೊಲೀಸ್ ಕಂಟ್ರೊಲ್ ರೂಂಗೆ ಕರೆ ಮಾಡಿರುವ ಸಂತೋಷ. ಮಾಹಿತಿ ತಿಳಿಯುತಿದ್ದಂತೆ ಸ್ಥಳಕ್ಕೆ ಆ್ಯಂಬುಲೆನ್ಸ್ ರವಾನಿಸಿರುವ ಪೊಲೀಸರು.
ಸಕ್ಕುಬಾಯಿ ಮೃತದೇಹ ಕಂಡು ಅನುಮಾನಗೊಂಡಿರುವ ಪೊಲೀಸರು. ಮರಣೋತ್ತರ ಪರೀಕ್ಷೆಗೆಂದು ಬೆಳಗಾವಿ ಬೀಮ್ಸ್ಗೆ ಸಕ್ಕುಬಾಯಿ ಮೃತದೇಹ ರವಾನೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಇದು ಕೊಲೆ ಎಂದು ಸಾಬೀತು.
ಆಗ ಸಂತೋಷ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿರುವ ಗೋಕಾಕ ಗ್ರಾಮೀಣ ಪೊಲೀಸರು. ಪ್ರೇಯಸಿ ಜೊತೆಗೆ ಉಳಿದ ದಿನಗಳನ್ನು ಕಳೆಯಲು ಪತ್ನಿ ಕೊಂದಿರುವುದಾಗಿ ಸಂತೋಷ ತಪ್ಪೊಪ್ಪಿಗೆ. 9 ವರ್ಷಗಳ ಹಿಂದೆ ಧಾರವಾಡ ತಾಲೂಕಿನ ಕಲ್ಲೂರ ಗ್ರಾಮದ ಸಕ್ಕುಬಾಯಿ ಜೊತೆಗೆ ವಿವಾಹ.
ಕಳೆದ ನಾಲ್ಕು ವರ್ಷಗಳಿಂದ ತನ್ನದೇ ಗ್ರಾಮದ ವಿಧವೆ ಜೊತೆಗೆ ಸಂತೋಷ ಲವ್ವಿಡವ್ವಿ. ಪ್ರೇಯಸಿ ಜೊತೆಗೆ ಕಾಲ ಕಳೆಯಲು ಪತ್ನಿ ಕೊಂದ ಆಸಾಮಿ ಈಗ ಹಿಂಡಲಗಾ ಜೈಲು ಪಾಲು. ಕೊಲೆ ಕೃತ್ಯದಲ್ಲಿ ವಿಧವೆ ಪಾತ್ರ ಇದೆಯೋ ಎಂಬ ಬಗ್ಗೆ ಮುಂದುವರೆದ ತನಿಖೆ.
ವಿಧವೆ ಮೇಲಿನ ಮೋಹಕ್ಕೆ ಇಲಿ ಪಾಷಾಣ ಕುಡಿಸಿ ಪತ್ನಿಗೆ ಚಟ್ಟಕಟ್ಟಿದ ಪತಿ – ಇಲ್ಲಿದೆ ಸಂಪೂರ್ಣ ಮಾಹಿತಿ
