ಉ.ಕ ಸುದ್ದಿಜಾಲ ಅಥಣಿ :
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರೂರು ಗ್ರಾಮದ ಹೊರವಲಯದಲ್ಲಿ ಅಪಘಾತ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಇದು ಮೇಲ್ನೋಟಕ್ಕೆ ಅಪಘಾತ ಅಂತಾ ಬಿಂಬಿಸಿ ಯಾರೋ ಕೊಲೆ ಮಾಡಿರಬಹುದು ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಮೃತ ವ್ಯಕ್ತಿಯನ್ನ ಖಿಳೆಗಾಂವಿ ಗ್ರಾಮದ ಚಂದ್ರಕಾಂತ ಸಂಗಪ್ಪ ಶಿವಪೂಜೆ (43) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ 5:00 ಗಂಟೆ ಸುಮಾರಿಗೆ ಕಾಮಾಲೆ ಔಷದಿ ತರಲು ಐನಾಪೂರಕ್ಕೆ ತೆರಳುವ ರಸ್ತೆ ಮದ್ಯ ಮಾರ್ಗದಲ್ಲಿ ಶಿರೂರು ಗ್ರಾಮದ ಹೊರವಲಯದಲ್ಲಿ. ಶಿರೂರ-ಅರಳಿಹಟ್ಟಿ ರಸ್ತೆಯ ತಿರುವಿನಲ್ಲಿ ಬೈಕ್ ಅಪಘಾತ ರೀತಿಯಲ್ಲಿ ಶವ ಪತ್ತೆಯಾಗಿದೆ.
ಮೃತ ಚಂದ್ರಕಾಂತಗೆ ಕಳೆದ 15 ವರ್ಷದ ಹಿಂದೆ ಮದುವೆ ಆಗಿದ್ದು ಮಡದಿ ಮಕ್ಕಳು ಇದ್ದಾರೆ. ಕುಟುಂಬಸ್ಥರ ದೂರಿನ ಆಧಾರದ ಮೇಲೆ ಅಥಣಿ ಪೊಲೀಸ್ ರು ತನಿಖೆ ನಡೆಸಿದ್ದು.ತೀವ್ರ ವಿಚಾರಣೆ ಶುರು ಮಾಡಿದ್ದಾರೆ.
