ಚಿಕ್ಕೋಡಿ :

RTPCR ಇಲ್ಲದ ಪ್ರಯಾಣಿಕರಿಗೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಕಳ್ಳ ಮಾರ್ಗದಿಂದ ಸಾಗಿಸುತ್ತಿದ್ದ ವಾಹನಗಳ ಮೇಲೆ  ಬೆಳಗಾವಿ ಜಿಲ್ಲಾ ಪೋಲಿಸರು ದಾಳಿ ನಡೆಸಿದ್ದಾರೆ.

ಕೊರೊನಾ ಆತಂಕದ ಹಿನ್ನಲೆ ಕರ್ನಾಟಕದ ಗಡಿಯಲ್ಲಿ ಇನ್ನು ಕಟ್ಟೆಚರ ಮುಂದುವರೆದಿದೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ  RTPCR ರಿಪೋರ್ಟ್ ಕಡ್ಡಾಯ ಎಂದು ಸರ್ಕಾರದ ಆದೇಶವಿದೆ. ಅದರಂತೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹತ್ತಿರ ಗಡಿಯಲ್ಲಿರುವ ಕೋಗನೊಳಿ ಚೆಕ್ ಪೋಸ್ಟ್ ಬಳಿ ಬಿಗಿ ಪೋಲಿಸ್ ಬಂದೋಬಸ್ತ್ ಇದ್ದು ಖಡಕ್ ತಪಾಸಣೆ ನಡೆಯುತ್ತಿದೆ‌.

ರಿಪೋರ್ಟ್ ಇಲ್ಲದೆ ಬಂದಂತವರಿಗೆ ವಾಪಸ ಕಳುಹಿಸಲಾಗುತ್ತಿದೆ. ಈ ಪರಿಸ್ಥಿತಿಯನ್ನೇ ಎನ್ಕ್ಯಾಶ್ ಮಾಡಿಕೊಂಡ ಸ್ಥಳಿಯ ಖಾಸಗಿ ವಾಹನಗಳು ಕೋವಿಡ್ ರಿಪೋರ್ಟ್ ಇಲ್ಲದೆ ಬಂದ ಮುಗ್ದ ಪ್ರಯಾಣಿಕರಿಗೆ ದುಬಾರಿ ಹಣ ಪಡೆದು ಕಳ್ಳ ಮಾರ್ಗದಿಂದ ಕರ್ನಾಟಕ ರಾಜ್ಯದಲ್ಲಿ ತಂದು ಬಿಡುತ್ತಿದ್ದಾರೆ‌.

ಸಿನಿಮೆಯ ರೀತಿ ಪ್ರಯಾಣಿಕರ ಸಾಗಾಟ :

ಮಹಾರಾಷ್ಟ್ರದ ಕರ್ನಾಟಕ ಗಡಿಯಲ್ಲಿರುವ ನಿಪ್ಪಾಣಿ ತಾಲೂಕಿನ ಕೊಗನೋಳಿ ಚಕ್‌ಪೊಸ್ಟ್ ಬಳಿ RTPCR ಕಡ್ಡಾಯ ಹಿನ್ನಲೆಯಲ್ಲಿ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಗಡಿಯಲ್ಲಿ ಶ್ರೇಯಸ್ ಟ್ರಾವೆಲ್ಸ್ ಖಾಸಗಿ ಬಸ್ ಸಿಬ್ಬಂದಿಗಳು ನಿಮ್ಮಗೆ RTPCR ವರದಿ ಕೊಡಿಸುತ್ತೇವೆ ಅಂತಾ RTPCR ಕೊಡಿಸಲು 200 ರೂ ಹಣ ಪಡೆದು ಅವರನ್ನು ಪುಣೆಯಿಂದ ಹುಬ್ಬಳಿಗೆ ಕರದುಕೊಂಡು ಬಂದು ಮಹಾರಾಷ್ಟ್ರದ ಕಾಗಲ ಪಟ್ಟಣದ ಹತ್ತಿರ RTPCR ಇಲ್ಲದ ಪ್ರಯಾಣಿಕರನ್ನು ಇಳಿಸಿ ಮ್ಯಾಕ್ಸಿಕೊ ಕ್ಯಾಬ್ ಮೂಲಕ ಕಳ್ಳ ಮಾರ್ಗದಿಂದ ಕರ್ನಾಟಕದ ಮಾಂಗ್ನೂರ ಕ್ರಾಸ್ ಬಳಿ ತಂದು ಬಿಡುತ್ತಿದ್ದರು. ನಂತರ ಬಸ್ ಮೂಲಕ ಅವರನ್ನು ಹುಬ್ಬಳಿಗೆ ಕರೆದೊಯ್ಯಲಾಗುತ್ತಿತ್ತು

ಪ್ರಕರಣದ ಪಕ್ಕಾ ಮಾಹಿತಿ ಪಡೆದು ಇಂತಹ ವಾಹನಗಳ ಮೇಲೆ ಚಿಕ್ಕೋಡಿ ಡಿಎಸ್ಪಿ ಹಾಗೂ ನಿಪ್ಪಾಣಿ ಪೋಲಿಸ್ ನೇತೃತ್ವದಲ್ಲಿ ದಾಳಿ ನಡೆಸಿ ನಾಲ್ಕು ಜನರನ್ನು ವಶಕ್ಕೆ ಪಡೆದು, ಒಂದು ಖಾಸಗಿ ಬಸ್ ಹಾಗೂ ಮ್ಯಾಕ್ಸಿಕೊ ಕ್ಯಾಬ್ ಜಪ್ತಿ ಮಾಡಿದ್ದಾರೆ‌. ಈ ಕುರಿತು ನಿಪ್ಪಾಣಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ