ಉ.ಕ‌ ಸುದ್ದಿಜಾಲ ಬೆಳಗಾವಿ :

ಹಣಕ್ಕಾಗಿ ಪರಿಚಿತ ಮಹಿಳೆ ಮರ್ಡರ್, ಕೊಲೆಗಾರನ ಸುಳಿವು ಕೊಟ್ಟ ಲಾಸ್ಟ್ ಕಾಲ್, ಕೊಲೆಯಾದ ಮಹಿಳೆ ಮೊಬೈಲದಿಂದಲೇ ಆರೋಪಿ ಲಾಕ್. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕೌಜಲಗಿ ಗ್ರಾಮದ ಕಬ್ಬಿನ ಗೆದ್ದಯಲ್ಲಿ ಕೊಲೆ.

ಕೌಜಲಗಿ ಗ್ರಾಮದ ನಿವಾಸಿ ಅನ್ನಪೂರ್ಣ ಪಡೇತನ್ನವರ ಕೊಲೆ. ಗೋಕಾಕ ತಾಲೂಕಿನ ಸಿಂಗಳಾಪೂರ ಗ್ರಾಮದ ದಿಲೀಪ್ ಗಡಕರಿ ಎಂಬಾತನಿಂದ ಕೃತ್ಯ. ದಿಲೀಪ್ ಅನ್ನಪೂರ್ಣ ಇಬ್ಬರ ಮಧ್ಯೆ 4 ವರ್ಷದ ಸ್ನೇಹವಿತ್ತು. ಕೊಲೆ ಮಾಡಿ 37 ಗ್ರಾಂ ಚಿನ್ನದ ಒಡುವೆ, ಮೊಬೈಲ್ ಕಳ್ಳತನ ಮಾಡಿದ್ದ ಆರೋಪಿ.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ. ಸಾವಿಗೂ ಮುನ್ನ ಅನ್ನಪೂರ್ಣ ದಿಲೀಪ್ ಗೆ ಲಾಸ್ಟ್ ಕಾಲ್ ಮಾಡಿದ್ದಳು. ಅನಂತರ ಇಬ್ಬರು ಮೊಬೈಲ್ ಸ್ವೀಚ್ ಆಫ್ ಆಗಿತ್ತು. ಮಧ್ಯಪ್ರದೇಶದಲ್ಲಿ ಅನ್ನಪೂರ್ಣ ಮೊಬೈಲ್ ಆಕ್ಟಿವ್ ಆಗಿತ್ತು.

ಮೊಬೈಲ್ ಬಳಕೆ ಆಗ್ತಿದ್ದ ಸೀಮ್ ಗೆ ಕರೆ ಮಾಡಿದ ಪೊಲೀಸರು.
ಸ್ನೇಹಿತನಿಗೆ ದಿಲೀಪ್ ಮೊಬೈಲ್ ಮಾರಿದ್ದ ವಿಚಾರ ಬೆಳಕಿಗೆ. ಸ್ನೇಹಿತ ಕೊಟ್ಟ ಸುಳಿನ ಮೇಲೆ ಆರೋಪಿ ಅರೇಸ್ಟ್. ಕೊಲೆ ಮಾಡಿದ ಸ್ಥಳಕ್ಕೆ ಹೋಗಿ ನೋಡಿದಾಗ ಸಿಕ್ಕಿದ್ದು ಅವಶೇಷಗಳು, ಸೀರೆ ಮಾತ್ರ. ಡಿಎನ್ಎ ಪರೀಕ್ಷೆ ಮೃತದೇಹದ ಅವಶೇಷಗಳನ್ನ ರವಾನಿಸಿದ ಪೊಲೀಸರು. ಬೆಳಗಾವಿ ಜಿಲ್ಲೆ ಕುಲಗೋಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು.