ಅಥಣಿ :

ಸಾಮಾನ್ಯ ಅಂದ್ರೆ ಒಂದು ಬಸ್ಸಿನಲ್ಲಿ 60 ಜನ ಅಥವಾ 70 ಜನ ಪ್ರಯಾಣ ಮಾಡಬಹುದು, ಆದರೆ, ಒಂದೇ ಬಸ್‌ದಲ್ಲಿ 100 ಕ್ಕೂ ಹೆಚ್ವು ಜನರು ಪ್ರಯಾಣಿಸುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ದಿನಂಪ್ರತಿ ಪ್ರಯಾಣಿಕರು ಜೀವ ಭಯದಲ್ಲಿ ತಮ್ಮ ಗ್ರಾಮಗಳಿಗೆ ಸೇರುತ್ತಿರುವ ವಿಪರ್ಯಾಸ ಇವೆಲ್ಲವುಗಳು ಕಂಡು ಬಂದದ್ದು ಮಾಜಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಕ್ಷೇತ್ರವಾದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ‌.

ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ದಿನಂಪ್ರತಿ ಹೀಗೆ ತೊಂದರೆ ಅನುಭವಿಸುತ್ತಿರುವ ಈ ದೃಶ್ಯಗಳು ಸಾಮಾನ್ಯವಾಗಿದೆ. ಅಥಣಿ ಪಟ್ಟಣದಿಂದ ಖಿಳೆಗಾಂವ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬಸ್ಸಿನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿ ಅಪಾಯವನ್ನು ಲೆಕ್ಕಿಸದೆ ಪ್ರಯಾಣ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಬಸ್ ಬಾಗಿಲಿಗೆ ಜೊತು ಬಿದ್ದು ಪ್ರಯಾಣ ಮಾಡಿದ್ದು ನೋಡುಗರಲ್ಲಿ ಭಯ ಹುಟ್ಟಿಸಿದೆ. ಅಥಣಿ ಪಟ್ಟಣದಿಂದ ಖೀಳೆಗಾಂವ್ ಗ್ರಾಮಕ್ಕೆ ಪ್ರತಿದಿನ ಇದೇ ರೀತಿ  ಬಸ್ ಹೊರಡುತ್ತದೆ. ಈ ಮಾರ್ಗವಾಗಿ ಹಲವು ಗ್ರಾಮಗಳು ಬರುವುದರಿಂದ ಸಾಮಾನ್ಯವಾಗಿ ಜನರು ಇದೇ ಬಸ್ಸನ್ನು ಅವಲಂಬಿಸಿದ್ದಾರೆ.

ಒಂದು ಬಸ್ನಲ್ಲಿ 60 ಜನಕ್ಕೆ ಮಾತ್ರ ಪ್ರಾಮಾಣಕ್ಕೆ ಅವಕಾಶ. ಆದರೆ, ಈ ಬಸ್ ನಲ್ಲಿ ಸರಿಸುಮಾರು 100 ಕ್ಕೂ ಹೆಚ್ಚು ಪ್ರಾಮಾಣಿಕರು ಸಂಚಾರ ಮಾಡುವ ಅನಿವಾರ್ಯತೆ ಎದುರಾಗಿದೆ. ಅಥಣಿ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಅಪಾಯದಲ್ಲಿ ವಿದ್ಯಾರ್ಥಿಗಳು ಸಂಚಾರ ಮಾಡುವಂತಾಗಿದೆ. ಸಂಚಾರ ಸಂದರ್ಭದಲ್ಲಿ ಒಂದು ಕಡೆ ವಾಲಿಕೊಂಡು ಹೊರಟ ಬಸ್ ಯಾವುದೇ ಒಂದು ವಾಹನಕ್ಕೆ ಇಂತಿಷ್ಟು ಪ್ರಯಾಣಕ್ಕೆ ಅವಕಾಶ ಇರುತ್ತದೆ.‌ ಆದರೆ ಅಥಣಿ ಡಿಪೋಗೆ ಸೇರಿದ ಬಸ್ನಲ್ಲಿ ಯಾವುದೇ ರೀತಿಯ ಪ್ರಮಾಣ ಇಲ್ಲದೆ ಇರುವುದರಿಂದ ಬಸ್ನಲ್ಲಿ ಜನರನ್ನು ತುಂಬಲಾಗುತ್ತದೆ.

ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಾಮಾನ್ಯವಾಗಿ ಒಂದು ಕಡೆ ವಾಲಿಕೊಂಡು ಬಸ್ ಮುಂದೆ ಚಲಿಸುತ್ತದೆ. ಒಳಗೆ ಕುಳಿತ ಪ್ರಯಾಣಿಕರು ಆತಂಕದಲ್ಲಿ ಸಂಚಾರ ನಡೆಸುವ ಪ್ರಸಂಗ ಎದುರಾಗಿದೆ. ದಿನನಿತ್ಯ ಬಸ್ನಲ್ಲಿ ಜನದಟ್ಟಣೆ ಆಗುವುದು ಸಹಜ ಇದರಿಂದ ಪ್ರಯಾಣಿಕರು ಜೀವಭಯದಲ್ಲಿ ಸಂಚಾರ ಮಾಡುವಂತಾಗಿದೆ. ವಯೋವೃದ್ಧರು, ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳಿಗೆ ಜನದಟ್ಟನೆಯಿಂದ ಸಂಕಷ್ಟ ಎದುರಾಗಿದೆ. ಹೆಚ್ಚುವರಿ ಬಸ್ ಬಿಡುವಂತೆ ಗ್ರಾಮಸ್ಥರು ಆಗ್ರಹಿಸಿದರು ಕೂಡಾ ಅಧಿಕಾರಿಗಳು ಮಾತ್ರ ನೊ ರಸ್ಪಾನ್ಸ್  ಅಥಣಿ ಖೀಳೆಗಾಂವ್ ಬಸ್ ಎಂದರೆ ನರಕಯಾತನೆ ಅನುಭವವಾಗುತ್ತದೆ. ದಿನನಿತ್ಯವೂ ಪ್ರಾಣಿಗಳಂತೆ ಜನರು ತುಂಬುತ್ತಾರೆ ನಮಗೆ ಹೆಚ್ಚುವರಿ ಬಸ್ ಬಿಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಅಥಣಿ ತಾಲೂಕಿನ ಖೆಳೆಗಾಂವ ಮಾರ್ಗದ ಬಸ್ ದಿನಂಪ್ರತಿ ಇಷ್ಟು ಜನ ದಟ್ಟನೆಯಿಂದ ಸಂಚರಿಸುತ್ತಿರುವ ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸುವ ಪ್ರಸಂಗ ಎದುರಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅಥಣಿ ಖೆಳೆಗಾಂವ ಮಾರ್ಗವಾಗಿ ಹೆಚ್ಚಿನ ಬಸ್ ಬಿಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ..