ಉ.ಕ ಸುದ್ದಿಜಾಲ ಚಿಕ್ಕೋಡಿ :

ವಸತಿ ಶಾಲೆಯ ಮೊದಲನೇ ಮಹಡಿಯಿಂದ ಬಿದ್ದು ಪಿಯು ವಿದ್ಯಾರ್ಥಿನಿ ಸಾವು ಹಿರೇಕೋಡಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಘಟನೆ‌ ನಡೆದಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ವಸತಿ ಶಾಲೆಯ ಮೊದಲನೇ ಮಹಡಿಯಿಂದ ಬಆಪ್ರೀನ್ ಜಮಾದಾರ 17 ಮೃತ ದುರ್ದೈವಿ ವಿದ್ಯಾರ್ಥಿನಿ. ಮೃತ ಬಾಲಕಿ ಗೋಕಾಕ ತಾಲೂಕಿನ ಶಿಂದಿ ಕುರಬೇಟ್ ಗ್ರಾಮದ ವಿದ್ಯಾರ್ಥಿನಿ.

ಪರೀಕ್ಷೆ ಹಿನ್ನೆಲೆ ಮಧ್ಯ ರಾತ್ರಿ ಮೊದಲ ಮಹಡಿಯಲ್ಲಿ ಓದುತ್ತ ಕುಳಿತಿದ್ದ ವಿದ್ಯಾರ್ಥಿನಿ. ಆಯಾ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಶಂಕೆ. ವಿದ್ಯಾರ್ಥಿನಿಯ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ಪೋಷಕರು.

ರಾತ್ರಿ ಸಮಯ 2:30 ಕ್ಕೆ ವಿದ್ಯಾರ್ಥಿನಿ ಹಾಸ್ಟೆಲ್‌ನಿಂದ ಬಿದ್ದಿದಾಳೆ ಎಂದು ಹಾಸ್ಟೆಲ್ ಸಿಬ್ಬಂದಿ ತಿಳಿಸುತ್ತಿದ್ದಾರೆ. ಆದರೆ ನಮಗೆ ಬೆಳಗಿನ ಜಾವ 4 ಗಂಟೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಾವು ಹುಡುಗಿಯ ಶವ ನೋಡಿದಾಗ ತಲೆ ಸೇರಿದಂತೆ ಕಿವಿಯಲ್ಲಿಯೂ ರಕ್ತಸ್ರಾವ ಆಗಿದೆ.

ಇದು ಸಹಜ ಸಾವಲ್ಲ ಎನ್ನುತ್ತಿರುವ ವಿದ್ಯಾರ್ಥಿನಿಯ ಪೋಷಕರು. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.