ಉ.ಕ ಸುದ್ದಿಜಾಲ ಅಥಣಿ :
ಸತೀಶ್ ಜಾರಕಿಹೊಳಿ ಸಿಎಂ ಕೂಗು ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯೆ ಸಿಎಂ ಸೀಟು ಸಧ್ಯಕ್ಕೆ ಖಾಲಿ ಇಲ್ಲಾ. ಸಿಎಂ ಬದಲಾವಣೆ ಪ್ರಶ್ನೆಯೇ ಬರಲ್ಲ. ಸಿಎಂ ಸಿದ್ದರಾಮಯ್ಯ ಅವರು ಮೇಲಿನ ಆರೋಪ ನಿರಾಧಾರ ಎಂದ ಅಥಣಿ ಶಾಸಕ ಲಕ್ಷ್ಮಣ ಸವದಿ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರುಬಪರೋಕ್ಷವಾಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಬೆಂಬಲಿಗರಿಗೆ ಟಾಂಗ್. ಸಿಎಂ ಕುರ್ಚಿ ಖಾಲಿ ಇಲ್ಲದ್ದಿದ್ದಾಗ ಸಿಎಂ ಬದಲಾವಣೆ ಕುರಿತು ಚರ್ಚೆ ಅನಾವಶ್ಯಕ ಎಂದು ಹೇಳಿದರು.
ದಲಿತರು ಸಿಎಂ ಆಗ್ಬೇಕು ಎನ್ನುವ ವಿಚಾರ ಸವದಿ ಪ್ರತಿಕ್ರಿಯೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶವಿದೆ. ಯಾರ ಬೇಕಾದರೂ ಸಿಎಂ ಆಗಬಹುದು.ಬಸಿಎಂ ಆಗಬಾರದು ಅಂತ ಸಂವಿಧಾನದಲ್ಲಿ ಬರದಿಲ್ಲ.
ಸಂವಿಧಾನದಲ್ಲಿ ಎಲ್ಲರಿಗೂ ಸಿಎಂ ಆಗುವ ಅವಕಾಶವಿದೆ ಅಂತ ಇದೆ.ಬಮತದಾರರಿಗೂ ಗದ್ದುಗೆಗೆ ಹೋಗುವ ಅವಕಾಶ ಇದೆ. ಸಂದರ್ಭ ತಕ್ಕಂತೆ ಬದಲಾವಣೆ ಆಗುತ್ತವೆ ಚರ್ಚೆ ಮಾಡುವುದು ಅನಾವಶ್ಯಕ ಎಂದರು.