ಉ.ಕ ಸುದ್ದಿಜಾಲ ಚಿಕ್ಕೋಡಿ :

ನಿಪ್ಪಾಣಿಯಲ್ಲಿ ಮೊನ್ನೆ ನಡೆದ ಮಾನವ ಬಂಧುತ್ವ ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಹಿಂದೂ ಪದದ ಬಗ್ಗೆ ಮಾತನಾಡಿದ ವಿಚಾರವಾಗಿ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಆದರೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸತೀಶ ಜಾರಕಿಹೊಳಿ ಪರವಾಗಿ ಹಾಗೂ ವಿರೋಧವಾಗಿ ಪ್ರತಿಭಟನೆಗಳು ನಡೆಯುತ್ತಿವೆ.

ಸತೀಶ್ ಜಾರಕಿಹೋಳಿ ಪರ ದಲಿತ ಸಂಘಟನೆಗಳ ಪ್ರತಿಭಟನೆ ನಡೆಸಿದ್ದು I Stand with Satish ಎಂಬ ಕ್ಯಾಂಪೇನ್ ನಡೆಸುತ್ತಿರುವ ದಲಿತ ಸಂಘಟನೆಗಳು, ನಿಪ್ಪಾಣಿ ಪಟ್ಟಣದ ಸಂಭಾಜಿ ವೃತ್ತದಲ್ಲಿ ದಲಿತ ಸಂಘಟನೆಗಳಿಂದ ಪ್ರತಿಭಟನೆ ಎರಡು ದಿನಗಳ ಹಿಂದೆ ಬಿಜೆಪಿಯಿಂದ ಹೇಳಿಕೆ ಖಂಡಿಸಿ ವಿರೋಧದ ಪ್ರತಿಭಟನೆ ಇಂದು ಸತೀಶ್ ಜಾರಕಿಹೋಳಿ ಪರವಾಗಿ ಪ್ರತಿಭಟನೆ ನಿಪ್ಪಾಣಿಯಲ್ಲಿ ಜೋರಾಗಿರುವ ಪರ ವಿರೋದದ ಪ್ರತಿಭಟನೆಗಳು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿಯವರ ಹಿಂದೂ ಹೇಳಿಕೆ ವಿರುದ್ಧ ಚಿಕ್ಕೋಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು.

ಚಿಕ್ಕೋಡಿ ಜಿಲ್ಲಾ ಬಿಜೆಪಿ ವತಿಯಿಂದ ಚಿಕ್ಕೋಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು. ಚಿಕ್ಕೋಡಿಯ ಬಸವ ವೃತ್ತದಿಂದ ಪ್ರಾರಂಭವಾದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಸತೀಶ ಜಾರಕಿಹೋಳಿಯವರ ಹಿಂದೂ ಹೇಳಿಕೆಯ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.

ನಂತರ ಚಿಕ್ಕೋಡಿಯ ಎಸಿ ಕಚೇರಿಗೆ ತೆರಳಿ ಸತೀಶ ಜಾರಕಿಹೋಳಿ ವಿರುದ್ಧ ಕ್ರಮಕೈಗೊಳ್ಳುವಂತೆ ಎಸಿ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದರು.