ಉ.ಕ ಸುದ್ದಿಜಾಲ‌ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡರಹಟ್ಟಿ ಗ್ರಾಮದಲ್ಲಿ ಅಕ್ರಮವಾಗಿ ಸಾರಾಯಿ ಟೆಟ್ರಾ ಪ್ಯಾಕ್‌ಗಳನ್ನು ಮಾರಾಟ ಮಾಡಲು ಸಂಗ್ರಹಿಸಿಟ್ಟ ಅಡ್ಡೆ ಮೇಲೆ ಅಥಣಿ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿ 156 ಸಾರಾಯಿ ಪ್ಯಾಕ್‌ಗಳನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.

ರಡೇರಹಟ್ಟಿ ಗ್ರಾಮದ ರಮೇಶ ಬಾಳಪ್ಪ ನಾಯಿಕ (30) ಬಂಧಿತ ಆರೋಪಿ, ಇವರು ಗ್ರಾಮದ ಸರ್ಕಾರಿ ಪುನರ್ವಸತಿ ಕೇಂದ್ರದ ಬಳಿ ಅಕ್ರಮವಾಗಿ ಮಾರಾಟ ಮಾಡಲು ಮದ್ಯದ ಟೆಟ್ರಾ ಪ್ಯಾಕ್‌ಗಳನ್ನು ಸಂಗ್ರಹಿಸಿಟ್ಟಿದ್ದರು.

ಖಚಿತ ಮಾಹಿತಿ ಪಡೆದ ಅಥಣಿ ಪೊಲೀಸರು ದಾಳಿ ನಡೆಸಿ 6200 ರೂ. ಮೊತ್ತದ ವಿವಿಧ ಕಂಪನಿಯ ಟೆಟ್ರಾ ಪ್ಯಾಕ್‌ಗಳನ್ನು ವಶಪಡಿಸಿಕೊಂಡು ಆರೋಪಿ ರಮೇಶನನ್ನು ಬಂಧಿಸಲಾಗಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಳಿಯಲ್ಲಿ ಅಥಣಿ ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ, ತನಿಖಾ ಸಹಾಯಕ ಪಿ.ಸಿ. ಕಂಟಿಗೊಂಡ, ಭೀಮಸೇನ ಮನ್ನಾಪುರ, ಎಸ್.ಎಸ್. ಸನದಿ, ರಮೇಶ ಹಾದಿಮನಿ ಪಾಲ್ಗೊಂಡಿದ್ದರು.