ಉ.ಕ ಸುದ್ದಿಜಾಲ ಅಥಣಿ :
ಅನಾರೋಗ್ಯ ಹಿನ್ನಲೆ ಮಹಾರಾಷ್ಟ್ರದ ಸಾಂಗ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಶಿಕ್ಷಕ ಸವಣ್ಣಪ್ಪಿರುವ ಘಟನೆ ಬುಧವಾರ ಸಾಯಂಕಾಲ ನಡೆದಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಅಜಯಕುಮಾರ ಯಶವಂತ ದೇವಮಾನೆ(55) ಮೃತ ದುರ್ದೈವಿ. ಇವರು ಕಳೆದ 33 ವರ್ಷಗಳಿಂದ ಸರ್ಕಾರಿ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದರು.
ಕಳೆದ ಎಂಟು ದಿನಗಳ ಹಿಂದೆ ಎದೆ ನೋವು ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಸಾಂಗ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು,
ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಾಯಂಕಾಲ ಕೊನೆಯುಸಿರಿಳೆದಿದ್ದಾರೆ. ಮೂವರು ಮಕ್ಕಳು ಮಡದಿ ,ಅಪಾರ ಬಂಧು-ಬಳಗ ಆಗಲಿದ್ದಾರೆ.
ಅನಾರೋಗ್ಯ ಹಿನ್ನಲೆ ಶಿಕ್ಷಕ ಸಾವು
