ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು ಬಾಣಂತಿ ಅಂಜಲಿ ಪಾಟೀಲ್(31) ಸಾವು. ಬಿಮ್ಸ್ ನಲ್ಲಿ ನಿನ್ನೆ ರಾತ್ರಿ ಸಿಜರಿನ್ ಮೂಲಕ ಹೆರಿಗೆ. ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದ ಅಂಜಲಿ ಪಾಟೀಲ್‌.

ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ಅಂಜಲಿ ಪಾಟೀಲ್. ಅಂಜಲಿಗೆ ಜನವರಿ 22ಕ್ಕೆ ಹೆರಿಗೆ ‌ದಿನಾಂಕ ನೀಡಿದ್ದ ವೈದ್ಯರು. ಬಳಿಕ ಹೆರಿಗೆ ನೋವು ಕಾಣಿಸದ ಹಿನ್ನೆಲೆ ನಿನ್ನೆ ಆಸ್ಪತ್ರೆಗೆ ದಾಖಲು. ಹೆರಿಗೆ ಬಳಿಕ ಬಾಣಂತಿ ಸಾವು ಹಿನ್ನೆಲೆ. ವೈದ್ಯರ ವಿರುದ್ಧ ದೂರು ನೀಡಲು ಮುಂದಾದ ಕುಟುಂಬಸ್ಥರು.

ಬಿಮ್ಸ್ ಹೆರಿಗೆ ವಾರ್ಡ್ ಬಳಿ ಕುಟುಂಬಸ್ಥರ ಕಣ್ಣಿರು. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ. ಬಾಣಂತಿ ಶವ ಹೆರಿಗೆ ವಾರ್ಡ್ ನಿಂದ ಮರಣೋತ್ತರ ಪರೀಕ್ಷೆಗೆ ಶಿಫ್ಟ್. ಬಾಣಂತಿ ಅಂಜಲಿ ಪಾಟೀಲ್ ಶವ ನೋಡಿ ಕುಟುಂಬಸ್ಥರ ಆಕ್ರಂದನ.

ಬೀಮ್ಸ್ ಹೆರಿಗೆ ವಿಭಾಗದ ಮುಖ್ಯಸ್ಥ ಡಾ. ವಸಂತ ಕಬ್ಬೂರ ಮಾಧ್ಯಮಗಳಿಗೆ ಹೇಳಿಕೆ ನಿನ್ನೆ ಸಂಜೆ ನಾಲ್ಕು ಗಂಟೆಗೆ ಅಂಜಲಿ ಪಾಟೀಲ ಒಪಿಡಿಗೆ ಬಂದಿದ್ದರು ಜ.27 ಕ್ಕೆ ಅಂಜಲಿ ಪಾಟೀಲ ಹೆರಿಗೆ ದಿನಾಂಕ ನೀಡಲಾಗಿತ್ತು. ಒಪಿಡಿಯಲ್ಲಿ ಪರಿಶೀಲನೆ ನಡೆಸಿದಾಗ ಮಗುವಿನ ಹಾರ್ಟ್‌ಬೀಟ್ ಕಡಿಮೆ ಆಗಿತ್ತು

ಈ ಕಾರಣಕ್ಕೆ ಸಿಜರಿನ್ ಮೂಲಕ ರಾತ್ರಿ 11.05 ಕ್ಕೆ ಹೆರಿಗೆ ಮಾಡಿದರು. ಬೆಳಗ್ಗೆ 5 ಕ್ಕೆ ಅಂಜಲಿ ಪಾಟೀಲ ಸಾವನಪ್ಪಿದ್ದಾರೆ. ರಕ್ತ ಹೆಪ್ಪುಗಟ್ಟಿ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಅಂಜಲಿ ಸಾವಿಗೆ ಆಮ್ನಿಯೊಟೆಕ್ ಪ್ಲೂಯಿಡ್ ಎಂಬಾಲೀಸ್ ಕಾರಣ ಎಂಬುದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ, ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು.