ಉ.ಕ ಸುದ್ದಿಜಾಲ ಅಥಣಿ :
ಫೈನಾನ್ಸ್ ಕಿರುಕುಳ ಜೊತೆಗೆ ದುಬಾರಿ ಬಡ್ಡಿ ವ್ಯವಹಾರ ನಿಲ್ಲಿಸುವದು ಸರಕಾರದ ಜವಾಬ್ದಾರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಶಾಸಕ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಈ ಕುರಿತು ಸಿಎಂ ವಿಶೇಷ ಸಭೆ ನಡೆಸಿ ಸೂಚನೆ ನೀಡಿದ್ದಾರೆ ಬಡವರಿಗೆ ತೊಂದರೆ ನೀಡದಂತೆ ಸಿಎಂ ಆದೇಶಿಸಿದ್ದಾರೆ ಅಥಣಿ ತಾಲೂಕಿನಲ್ಲಿ ಅಂಥ ಯಾವುದೇ ಕಿರುಕುಳ ಪ್ರಕರಣ ವರದಿ ಆಗಿಲ್ಲ. ವರದಿ ಆದರೇ ನಾನೇ ಸ್ವತಃ ಅಧಿಕಾರಿಗಳೊಟ್ಟಿಗೆ ಹೋಗಿ ತಕ್ಕ ಶಾಸ್ತಿ ಮಾಡುತ್ತೇನೆ ಎಂದ ಸವದಿ
ಅಥಣಿ ತಾಲೂಕಾಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆ ಸಾವು ಪ್ರಕರಣ ಈ ಪ್ರಕರಣದಲ್ಲಿ ವೈದ್ಯರ ಲೋಪ ಕಂಡು ಬಂದಿಲ್ಲ. ಅನಾರೋಗ್ಯದ ಸಮಸ್ಯೆಯಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಸತ್ತಿ ಗ್ರಾಮದಲ್ಲಿ ಶಾಸಕ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.