ಉ.ಕ ಸುದ್ದಿಜಾಲ ಚಿತ್ರದುರ್ಗ :
ಲಾರಿ ಹಾಗೂ ಕಾರು ಮಧ್ಯೆ ಭೀಕರ ರಸ್ತೆ ಅಪಘಾತ ನಾಲ್ವರ ದುರ್ಮರಣ, ಮೂವರಿಗೆ ಗಾಯಗೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಬ್ರಿಡ್ಜ್ ರಾಷ್ಟ್ರೀಯ ಹೆದ್ದಾರಿ 50 ಎ ನಲ್ಲಿ ನಡೆದಿದೆ.
ಮೃತರು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕುದರೆಸಾಲವಾಡಗಿ ಗ್ರಾಮದವರು. ಭೀಮಾಶಂಕರ (26), ಸಂಗನಾ ಬಸಪ್ಪ (36), ರೇಖಾ (29), ಅಗಸ್ತ್ಯ (8), ಮೃತ ದುರ್ದೈವಿಗಳು, ಅನ್ವಿತಾ(6), ಆದರ್ಶ(4), ಸೇರಿ ಇನ್ನೂ ಒಬ್ಬರಿಗೆ ಗಾಯ. ಗಾಯಾಳುಗಳನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು.
ಟ್ರಕ್ ಹೊಸಪೇಟೆಯಿಂದ ಬೆಂಗಳೂರು ಕಡೆಗೆ ಚಲಿಸುತ್ತಿತ್ತು ಕಾರು ವಿಜಾಪುರದಿಂದ ಚಿಕ್ಕಮಗಳೂರಿಗೆ ಹೊರಟಿತ್ತು ವೇಗವಾಗಿ ಬಂದ ಕಾರು ಟ್ರಕ್ ಗೆ ಹಿಂಬದಿಯುಂದ ಡಿಕ್ಕಿ ಹೊಡೆದು ಅವಘಡ.
ಸಂಗನಾ ಬಸಪ್ಪ ಹಾಗೂ ಈರಣ್ಣಾ ಎಂಬವರ ಕುಟುಂಬದವರು ಚಿಕ್ಕಮಗಳೂರು ಟ್ರಿಪ್ ಗೆ ಹೊರಟಿದ್ರು ಪ್ರವಾಸಕ್ಕೆ ಹೊರಟಿದ್ದರು. ನಿನ್ನೆ ರಾತ್ರಿ11 ಕ್ಕೆ ಮನೆಯಿಂದ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದ ಮೃತರು. ಚಿಕ್ಕಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು.
ಚಿಕ್ಕಮಂಗಳೂರಿನಲ್ಲಿ ಪತ್ನಿ ಮಕ್ಕಳೊಂದಿಗೆ ರಜೆ ಕಳೆಯಲು ಪ್ಲ್ಯಾನ್ ಮಾಡಿದ್ದ ಸಂಗನಬಸಪ್ಪ. ಚಿತ್ರದುರ್ಗದತ್ತ ಪ್ರಯಾಣ ಬೆಳೆಸಿರೋ ಕುಟುಂಬಸ್ಥರು. ಮನೆಯಲ್ಲಿ ಮಡುಗಟ್ಟಿದ ಆಕ್ರಂದನ.