ಉ.ಕ ಸುದ್ದಿಜಾಲ ಚಿಕ್ಕೋಡಿ :

ರೈತರ ಆತ್ಮಹತ್ಯೆ ಬಗ್ಗೆ ಸಚಿವ ಶಿವಾನಂದ್ ಪಾಟೀಲ್ ಲಘು ಹೇಳಿಕೆ ವಿಚಾರ ಸಚಿವ ಶಿವಾನಂದ‌ ಪಾಟೀಲ್ ಹೇಳಿಕೆಗೆ ಗಡಿನಾಡು ಚಿಕ್ಕೋಡಿ ರೈತರು ಕೆಂಡಾಮಂಡಲ. ಸಚಿವರೇ ನಮ್ಮ ಸಂಘದಿಂದ ನಿಮಗೆ ರೊಕ್ಕ ಕೊಡ್ತೀವಿ. ನೀವು ಆತ್ಮಹತ್ಯೆ ಮಾಡಿಕೊಳ್ಳಿ! ಎಂದು ರೈತರಿಂದ ಸಚಿವರಿಗೆ ಸವಾಲ್.

ಸಚಿವರೇ ನಿಮ್ಮ ರೇಟು ಎಷ್ಟೆಂದು ಹೇಳಿ, ರೈತ ಸಂಘದಿಂದ ಕೊಡ್ತೇವೆ. ಸಿದ್ದರಾಮಯ್ಯನವರೇ ಸಂಪುಟದಿಂದ ಶಿವಾನಂದ ಪಾಟೀಲ್‌ರನ್ನು ಕೈಬಿಡಿ, ಇಲ್ಲವಾದರೇ ರೈತರಿಂದ ಎದುರಾಗುವ ಪ್ರತಿಭಟನೆ ಎದರುಸಿ ಎಂದು ರೈತರಿಂದ ಎಚ್ಚರಿಕೆ. ಐದು ಲಕ್ಷಕ್ಕೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ…?

ಯಾರಿಗೆ ಬೇಕು ನಿಮ್ಮ ಹಣ ಎಂದು ರೈತರಿಂದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಕಬ್ಬು ಕಳುಹಿಸಿದ್ದ ಬಾಕಿ ಮೊತ್ತ ಇನ್ನು ಸಂದಾಯವಾಗಿಲ್ಲ. ಸಚಿವರೇ ರೈತರ ಬಾಕಿ ಮೊತ್ತದತ್ತ ಸ್ವಲ್ಪ ಗಮನಹರಿಸಿ ಎಂದು ರೈತರ ಬೇಡಿಕೆ.