ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಬಳಿ ಬೈಕ ಸ್ಕಿಡ್ ಆಗಿ ಆಯ ತಪ್ಪಿದ ಪರಿಣಾಮ ಯೋಧ ಲಕ್ಷ್ಮಣ ಸಾವನಪ್ಪಿದ್ದು ಇತನ ಸಹೋದರ ಸಂಪತ ಗಾಯಗೊಂಡಿದ್ದು ಪಕ್ಕದ ಮಹಾರಾಷ್ಟ್ರದ ಖಾಸಗಿ‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮಣ ಇಂದುದಾಸ ಘೊರ್ಪಡೆ (23) ಯೋಧ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಯೋಧ ಲಕ್ಷ್ಮಣ ಘೋರ್ಪಡೆ ರಜೆ ಹಿನ್ನಲೆಯಲ್ಲಿ ಸ್ವ ಗ್ರಾಮಕ್ಕೆ ಆಗಮಿಸಿದ್ದರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದು ಅವರು 15ನೇ ಮರಾಠಾ ಕೇರ 99 ಎಪಿಓ ಅರುಣಾಚಲ ಪ್ರದೇಶದಲ್ಲಿ ಲೂಂಪು ಘಟಕದಲ್ಲಿ ಸೈನಿಕ ಸೇವೆ ಸಲ್ಲಿಸುತ್ತಿದ್ದರು.

ಇನ್ನೊಬ್ಬ ಯೋಧ ಸತೀಶ ಸಂಪತ ಘೊರ್ಪಡೆ ಗಂಭೀರವಾಗಿ ಗಾಯಗೊಂಡಿದ್ದು ಮಿರಜ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಮೃತ ಯೋಧನ ಅಂತ್ಯಕ್ರಿಯೆ  ಸ್ವ ಗ್ರಾಮದಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ನೆರವೇರಿಸಲಾಯಿತು.