ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಜಿಲ್ಲೆಗೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿ ಭೀಮಾಶಂಕರ ಗುಳೇದ ಶುಕ್ರವಾರ ಅಧಿಕಾರಿ ವಹಿಸಿಕೊಂಡರು. ಈ ಹಿಂದೆ ಎಸ್ಪಿ ಆಗಿದ್ದ ಡಾ. ಸಂಜೀವ ಪಾಟೀಲ ಅವರು ಪುಷ್ಪಗುಚ್ಛ ನೀಡಿ, ಅಧಿಕಾರ ಹಸ್ತಾಂತರಿಸಿದರು.
ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಆದ್ಯತೆ ನೀಡುತ್ತೇನೆ. ಡಾ. ಸಂಜೀವ ಪಾಟೀಲ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಜಿಲ್ಲೆಯ ಜನರ ಪ್ರೀತಿಗಳಿಸಿದ್ದಾರೆ. ಅವರ ಮಾದರಿಯಲ್ಲೇ ಕೆಲಸಗಳು ಮುಂದುವರಿಯಲಿವೆ.
ಬೆಳಗಾವಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಭೀಮಾಶಂಕರ ಹೇಳಿದರು.