ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಬಳಿ ಇರುವ ಕೃಷ್ಣಾ ನದಿಯಲ್ಲಿ ಅನಾಮಧೇಯ ವ್ಯಕ್ತಿ ಶವ ಪತ್ತೆಯಾಗಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಗೋಕಾಕ ಉದ್ಯಮಿ ಕೊಲೆ ಪ್ರಕರಣ ಕುರಿತು ಮೃತ ವ್ಯಕ್ತಿ ಶವದ ಹುಡುಕಾಟದ ಬೆನ್ನಲ್ಲೇ ಕೃಷ್ಣಾ ನದಿಯಲ್ಲಿ ಅನಾಮಧೇಯ ಶವ ಪತ್ತೆಯಾಗುದ್ದು ಹಲವು ಅನುಮಾನ ಹುಟ್ಟುಹಾಕಿತ್ತು.

ಸುಮಾರು 50 ವರ್ಷ ಆಸು ಪಾಸಿನ ಈ ವ್ಯಕ್ತಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿದ್ದು, ಶವ ಹೊರತೆಗೆದಿದ್ದು, ಇದು ಗೋಕಾಕ ಉದ್ಯಮಿ ಶವ ಅಲ್ಲ. ಇದು ಅಪರಿಚಿತ ಶವವಾಗಿದೆ.

ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಬಂಧಪಟ್ಟವರು ಯಾರಾದರೂ ಇದ್ದರೆ ಅಥಣಿ ಪೋಲಿಸ್ ಠಾಣೆಗೆ ಬೇಟಿ ನೀಡಲು ಸೂಚಿಸಲಾಗಿದೆ‌.