ಉ.ಕ ಸುದ್ದಿಜಾಲ ಕಾಗವಾಡ :
ಈ ಮೂಲಕ ಕಾಗವಾಡ ಠಾಣಾ ವ್ಯಾಪ್ತಿಯ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಇತ್ತೀಚಿನ ದಿನಗಳಲ್ಲಿ ಆರರಿಂದ ಏಳು ಜನರ ಧಕಾಯಿತರ ಗುಂಪು, ರಾತ್ರಿ ರಸ್ತೆ ಮೇಲೆ ಹೋಗುತ್ತಿರುವ ವಾಹನಗಳಿಗೆ ಕಲ್ಲು ತೂರಿದ್ದಾರೆ.
ಕಬ್ಬಿಣ ತುಂಡು ಅಥವಾ ಇತರೆ ಲೋಹದ ವಸ್ತುಗಳನ್ನು ಎಸೆದು, ವಾಹನ ನಿಲ್ಲಿಸಿದಲ್ಲಿ ಅವರ ಮೇಲೆ ಹಲ್ಲೆ ಮಾಡಿ, ಹಣ ಮತ್ತು ಇತರೆ ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗುತ್ತಿದ್ದು, ಆದ ಕಾರಣ ಎಲ್ಲ ಸಾರ್ವಜನಿಕರು ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮವಹಿಸಲು ಸೂಚಿಸಲಾಗಿದೆ
1. ಯಾವುದೇ ಕಾರಣಕ್ಕೂ ರಾತ್ರಿ ವೇಳೆ ನಿರ್ಜನ್ ಪ್ರದೇಶದಲ್ಲಿ ವಾಹನ ನಿಲ್ಲಿಸಬೇಡಿ.
2. ಸಂಶಯ ಬಂದ ಕೂಡಲೇ 112 ಅಥವಾ ಠಾಣೆಗೆ ಕರೆ ಮಾಡಿ.
3. ತೋಟದಲ್ಲಿ ಒಂಟಿ ಮನೆಗಳಲ್ಲಿ ವಾಸಿಸುವ ಜನರು ಸುರಕ್ಷತಾ ಕ್ರಮ ಕೈಗೊಳ್ಳುವುದು.
4. ಕೀಲಿ ಹಾಕಿದ ದೇವಸ್ಥಾನಗಳಲ್ಲಿ ದೇವರ ಮೈಮೇಲೆ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಬಿಡಬಾರದು.
5. ರಾತ್ರಿ ವೇಳೆಯಲ್ಲಿ ಯಾರಾದರೂ ಸಂಶಯಸ್ಪದವಾಗಿ ಬಾಗಿಲು ತಟ್ಟಿದಾಗ ಬಾಗಿಲು ತೆರೆಯದೆ ಪೊಲೀಸ್ ಠಾಣೆಗೆ ಮತ್ತು 112 ಗೆ ಕರೆ ಮಾಡುವುದು.
6. ಒಬ್ಬರೇ ಮನೆಗಳಲ್ಲಿ ಮಲಗಿಕೊಳ್ಳುವಾಗ ಕಾರದಪುಡಿ ಹಾಗೂ ಇತರೆ ಸುರಕ್ಷಿತ ಆಯುಧಗಳನ್ನು ಇಟ್ಟುಕೊಳ್ಳುವುದು.
7. ಈ ಮೇಲಿನ ವಿಷಯಗಳಬಗ್ಗೆ ಪಟ್ಟಣ ಪಂಚಾಯತ ಮತ್ತು ಗ್ರಾಮ ಪಂಚಾಯತ ರವರು ಸಾರ್ವಜನಿಕರಿಗೆ ಧ್ವನಿವರ್ಧಕಗಳ ಮೂಲಕ ಪ್ರಕಟಣೆ ಮಾಡುವದು.