ಉ.ಕ ಸುದ್ದಿಜಾಲ ರಾಯಬಾಗ :

ಕುರಿಗಳ ಮೇಲೆ ದಾಳಿ ಮಾಡಿ ಹೋಗಿರುವ ತೋಳ, ಸುಮಾರು 25 ಕುರಿಗಳು ಸಾವನಪ್ಪಿರುವ ಘಟನೆ  ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ‌ ನಡೆದಿದೆ.

ಬೊಮ್ಮನಾಳ ಗ್ರಾಮದ  ಮಲ್ಲಪ್ಪ ಯಲ್ಲಪ್ಪ ಹಿರೇಕೋಡಿ ಎಂಬುವವರಿಗೆ ಸೇರಿದ ಕುರಿಗಳು, ಬೊಮ್ಮನಾಳ ಗ್ರಾಮದ ರಬಕವಿ ತೋಟದಲ್ಲಿ ರೈತರ ಗದ್ದೆಯಲ್ಲಿ ತಂಗಿದ್ದ ಕುರಿಯ ಹಿಂಡು ಈ ವೇಳೆ ರಾತ್ರಿ ಏಕಾಏಕಿ ಕುರಿಗಳ ಮೇಲೆ ದಾಳಿ ಮಾಡಿ ಹೋಗಿರುವ ತೋಳ.

ಬೆಲೆ‌ ಬಾಳುವ ಕುರಿಗಳನ್ನು ಕಳೆದುಕೊಂಡು ಕಂಗಾಲಾಗಿರುವ ಕುರಿಗಾಹಿ ಮಲ್ಲಪ್ಪ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ. ರಾಯಬಾಗ ಪೊಲೀಸರು ಪರಿಶೀಲಿಸಿದ್ದು, ರಬಕವಿ ಎಂಬುವವರ ತೋಟದ ಜಮೀನದಲ್ಲಿ ಟೆಂಟ್ ಹೂಡಲಾಗಿದ್ದ ಸ್ಥಳದಲ್ಲಿ ಕುರಿಗಳನ್ನು ತೋಳಗಳು ಬಂದು ಸಾಯಿಸಿವೆ.

ಸ್ಥಳಕ್ಕೆ ರಾಯಬಾಗ ಪೋಲಿಸರು ಬೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. ರಾಯಬಾಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಕುರಿಗಳನ್ನ ಕಳೆದುಕೊಂಡ ರೈತ ದುಃಖಿತನಾಗಿದ್ದು ಸರ್ಕಾರದಿಂದ ಸಹಾಯ ಮಾಡಬೇಕೆಂದು ರೈತ ಮಲ್ಲಪ್ಪನ ಕುಟುಂಬ ಆಗ್ರಹಿಸಿದೆ.