ಉ.ಕ ಸುದ್ದಿಜಾಲ ಅಥಣಿ :

ದೇವರ ದರ್ಶನ ಪಡೆದ ಮನೆಗೆ ತೆರಳುವಾಗ ಕ್ರೂಸರ ಹಾಗೂ ಕಂಟೆನರ ನಡುವೆ ಅಪಘಾತ ಸಂಭವಿಸಿದ್ದು ಒಬ್ಬ ಮಹಿಳೆ ಸಾವನಪ್ಪಿದ್ದು, ಆರು ಜನರಿಗೆ ಗಂಭೀರ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟಟ್ಟಿ ಕ್ರಾಸ್ ಬಳಿ ನಡೆದಿದೆ.

ದೇವರ ದರ್ಶನ ಪಡೆದ ಮರಳಿ ಗ್ರಾಮಕ್ಕೆ ತೆರಳುವಾಗ ಅಪಘಾತ ಸಂಬಂವಿಸಿದೆ. ಸವದತ್ತಿ ಯಲ್ಲಮ್ಮನ ದರ್ಶನ ಪಡೆದು, ಚಿಂಚಲಿ ಮಾಯಕ್ಕ ದರ್ಶನ ಪಡೆದು ಸ್ವ ಗ್ರಾಮ ವಿಜಯಪುರ ಸಿಂದಗಿ ತಾಲೂಕಿನ ಚಿಕ್ಕ ಯರಗಲ್ಲ (ಕೇಡಿ) ಗ್ರಾಮಕ್ಕೆ ತೆರಳುವಾಗ ಅಥಣಿ ತಾಲೂಕಿನ ಸುಟಟ್ಟಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.

ಅಪಘಾತ ಸಂಭವಿಸೊದ ಬಳಿಕ ಅಥಣಿ ಸರ್ಕಾರಿ‌ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಗಾಯಾಳುಗಳನ್ನ ಮಹಾರಾಷ್ಟ್ರದ ಮಿರಜ ಹಾಗೂ ವಿಜಯಪೂರ ಆಸ್ಪತ್ರೆಗೆ ಕಳಿಸಲಾಗಿದೆ‌. ಸ್ಥಳಕ್ಕೆ ಅಥಣಿ ಪೋಲಿಸರು ಬೇಟಿ ನೀಡಿ ಪರಶೀಲನೆ ನಡೆಸಿದರು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕ ಯರಗಲ್ಲ (ಕೇಡಿ) ಗ್ರಾಮಸ್ಥರ ವಾಹನ ಅಪಘಾತವಾಗಿದ್ದು, ದೇವಕಿ ನಿಂಗಣ್ಣ ಕೀಚಡಿ (65) ಸ್ಥಳದಲ್ಲೇ ಸಾವನಪ್ಪಿದ್ದು ಆರು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ಪಕ್ಕದ ಜಿಲ್ಲೆ ವಿಜಯಪೂರಕ್ಕೆ ಹಾಗುಇ ಪಕ್ಕದ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮಿರಜ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.