ಉ.ಕ‌ ಸುದ್ದಿಜಾಲ‌ ಬೆಳಗಾವಿ :

ಮಾಜಿ ಪ್ತಧಾನಿ ನಿಧನ‌ ಹಿನ್ನೆಲೆ ಇಂದು ಆಯೋಜನೆ ಮಾಡಲಾಗಿದ್ದ‌ ಎಲ್ಲ ಕಾರ್ಯಕ್ರಮಗಳನ್ನ ರದ್ದುಪಡಿಸಿದ್ದೇವೆ‌ ನಮ್ಮೆಲ್ಲ ನಾಯಕರಿಗೆ ನಾನು ಮನವಿ ಮಾಡುತ್ತೇನೆ. ಇಂದು ಬೆಳಿಗ್ಗೆ 10.30 ಕ್ಕೆ ಮನಮೋಹನ್ ಸಿಂಗ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಮಾಡುತ್ತೇವೆ. ಸಮಾವೇಶದ ವೇದಿಕೆಯಲ್ಲಿ ಇಂದು ಬೆಳಿಗ್ಗೆ 10.30 ಕ್ಕೆ ಗೌರವ ಸಭೆ ನಡೆಸಲಿದ್ದೇವೆ

ಈಗಾಗಲೇ ನಗರಕ್ಕೆ ಆಗಮಿಸರುವ ಎಲ್ಲ ನಾಯಕರು ಮುಖಂಡರು ಗೌರವ ಸಭೆಯಲ್ಲಿ ಭಾಗಿಯಾಗಬೇಕು ಈಗಾಗಲೇ ಬೆಳಗಾವಿಗೆ ಆಗಮಿಸಿದ ನಾಯಕರುಗಳು ದೆಹಲಿಗೆ ತೆರಳುವ ವರೆಗೂ ಎಲ್ಲ ಮುಖಂಡರು‌ ಸಹಕಾರ ನೀಡಬೇಕು ಈಗಾಗಲೇ ಸಮಾವೇಶಕ್ಕಾಗಿ ಆಗಮಿಸಿದ್ದ ವಿವಿಧ ರಾಜ್ಯಗಳ ನಾಯಕರುಗಳಿಗೆ ವಾಪಸ್ ತೆರಳುವ ಹಿನ್ನೆಲೆ ಸಿದ್ಧತೆ ಮಾಡುವ ಕಾರ್ಯ ಮಾಡುತ್ತಿದ್ದೇವೆ.

ಇಂದು ಸರ್ಕಾರಿ‌ ರಜೆ ಘೋಷಣೆ ಮಾಡಲಾಗಿದೆ. ಇಂದು ನಡೆಯಬೇಕಿದ್ದ ಎಲ್ಲ ಕಾರ್ಯಕ್ರಮಗಳನ್ನೂ ಸಹ ರದ್ದು ಮಾಡಲಾಗಿದೆ ಒಂದು ವಾರಗಳ ಕಾಲ‌ ಶೋಕಾಚರಣೆ ನಾನು ಸೇರಿದಂತೆ ಅನೇಕ‌ಹಿರಿಯ ನಾಯಕರುಗಳು ನಾಳೆ ದೆಹಲಿಗೆ ತೆರಳಲಿದ್ದೇವೆ. ಸಿಎಂ ಜೊತೆಗೆ ಚರ್ಚೆ ಮಾಡಿ ಇಂದು ನಾವೆಲ್ಲರೂ ದೆಹಲಿಗೆ ತೆರಳಲಿದ್ದೇವೆ ಎಂಡ ಡಿಕೆಸಿ.

ಮಾಜಿ ಪ್ರಧಾನಿ‌‌ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಮಾಜಿ ಪ್ರಧಾನಿ ನೆನೆದು ಬಾವುಕರಾದ ಡಿಸಿಎಂ ಡಿ ಕೆ ಶಿವಕುಮಾರ ಈ‌ ದೇಶದ ಒಬ್ಬ ದೊಡ್ಡ ಆಸ್ತಿ ನಮ್ಮ ರಾಷ್ಟ್ರದ ಹಿರಿಯ ನಾಯಕ. ನಮ್ಮ ನೆಚ್ಚಿನ‌ ಪ್ರಧಾಮಿಗಳಾಗಿದ್ದ ಮನಮೋಹನ್ ಸಿಂಗ್ ಅವರನ್ನ ಕಳೆದುಕೊಂಡಿದ್ದೇವೆ.

ಅಬ್ದುಲ್ ಕಲಾಮ್ ಅವರು ಸೋನಿಯಾ ಗಾಂಧಿ ಅವರನ್ನ ಪ್ರಧಾನಿಯನ್ನಾಗಿ ಆಹ್ವಾನಿಸಿದ್ದರು. ದೇಶದ ಆರ್ಥಿಕ ವ್ಯವಸ್ಥೆಗೆ ಒಬ್ಬ ಶ್ರೇಷ್ಠ ಆರ್ಥಿಕ ತಜ್ಞನನ್ನ ಪ್ರಧಾನಿಯನ್ನಾಗಿ ಮಾಡಿದ್ದನ್ನು ನಾವು ಸ್ಮರಿಸಬಹುದು ಅವರ ಕಾಲದಲ್ಲಿ ಕೊಟ್ಟಂತ ಕೊಡುಗೆಗಳು ಖಾಯಿದೆಗಳ ಬಡವರ ಬದುಕಿನ‌ಬಗ್ಗೆ ಒಂದು ರೂಪ‌ ಕಲ್ಪಿಸಿದ ಹಿರಿಯ ನಾಯಕ‌ ಮನಮೋಹನ್ ಸಿಂಗ್.

ಆಹಾರ ಭದ್ರತೆ ಖಾಯ್ದೆ ಸೇರಿದಂತೆ ಅನೇಕ ಖಾಯ್ದೆ ಜಾರಿಗೆ ತಂದವರು. ರೈತರಿಗೆ ಸಾಕಷ್ಟು ಸಹಾಯ ಮಾಡಿದಂತಹ ವ್ಯಕ್ತಿ ರೈತರಿಗಾಗಿ ವಿಶೇಷ ಕಾರ್ಯಕ್ರಮಗಳನ್ನ ರೂಪಿಸಿದ್ದ ಮಹಾನ್ ನಾಯಕ ಮನಮೋಹನ್ ಸಿಂಗ್ ಬೆಂಗಳೂರು ನಗರವನ್ನ ಅತಿ ಹೆಚ್ಚು ಪ್ರೀತಿ ಮಾಡಿದ ಮಹಾನ್ ನಾಯಕ ಅವರ ಕೊಡುಗೆ ಬಹಳ‌ ಅಪಾರ ಎಂದ ಡಿಕೆಸಿ.