ಉ.ಕ ಸುದ್ದಿಜಾಲ ಕಾಗವಾಡ :
ನಾಡಿನೆಲ್ಲೆಡೆ ಕರ್ನಾಟಕ ರಾಜ್ಯೋತ್ಸವವನ್ನು ಇಡೀ ಜನತೆ ಅದ್ಧೂರಿಯಾಗಿ ಸಡಗರ ಸಂಭ್ರಮದೊಂದಿಗೆ ಆಚರಣೆ ಮಾಡಿದ್ದಾರೆ.
ಎಲ್ಲೆಲ್ಲೂ ಕನ್ನಡದ ಗೀತೆಗಳು, ಕೆಂಪು ಹಳದಿ ಬಾವುಟಗಳು ರಾರಾಜಿಸಿವೆ. ಅದರಲ್ಲೂ ಗಡಿ ನಾಡು ಕುಂದನಗರಿ ಬೆಳಗಾವಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಮೈನವಿರೇಳಿಸುವಂತೆ ಇತ್ತು.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಇಡೀ ದಿನ ಕನ್ನಡದ ಕಂಪು ಪಸರಿಸಿತು. ಮಧ್ಯರಾತ್ರಿಯಿಂದ ವಿವಿಧ ಕನ್ನಡ ಪರ ಸಂಘಟನೆಗಳು ಕಣಿದು ಕುಪ್ಪಳಿಸಿದರು. ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದ ರಾಣಿ ಚನ್ನಮ್ಮ ವೃತ್ತವು ಸಂಪೂರ್ಣ ಕನ್ನಡಮಯವಾಗಿತ್ತು.
ಮಧ್ಯರಾತ್ರಿಯಿಂದಲ್ಲೇ ವಿವಿಧ ಕಾರ್ಯಾಕ್ರಮಗಳು ನಡೆದವು. ಯುವಕರು ಬೃಹದಾಕಾರಾದ ಕನ್ನಡ ಬಾವುಟಗಳನ್ನು ತಿರುಗಿಸಿ ಕನ್ನಡದ ಮೇಲಿನ ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ಮಧ್ಯರಾತ್ರಿ ಆರಂಭವಾದ ಸಂಭ್ರಮ ಇಡೀ ದಿನ ಮುಂದುವರೆದಿತ್ತು. ಕೆಲ ಯುವಕರು ಕನ್ನಡ ಬಾವುಟಗಳನ್ನು ತಿರುಗಿಸಿ ಕನ್ನಡದ ಮೇಲಿನ ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ರಾಜ್ಯೋತ್ಸವದಲ್ಲಿ ಖದರ್ ಬೇರೆ ಲೆವೆಲ್ ಇರುತ್ತೆ ಎಂಬುದನ್ನು ನಿರೂಪಿಸುವಂತಿತ್ತು ಈ ದೃಶ್ಯಗಳು. ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಕನ್ನಡದ ಮಕ್ಕಳು ಸೇರಿದಂತೆ 5 ಲಕ್ಷ ಜನ ಸೇರಿದ್ದರು ಎಂದು ಡ್ರೋಣ ಸೆರೆಹಿಡಿದ ವಿಡಿಯೋ ಮೂಲಕ ಅಂದಾಜಿಸಲಾಗಿದೆ.
ಇನ್ನು ಯುವಜನತೆ ಚನ್ನಮ್ಮ ವೃತ್ತಕ್ಕೆ ಆಗಮಿಸಿ ಡಿಜೆ ಸೌಂಡ್ಗೆ ಸಖತ್ ಸ್ಟೇಪ್ ಹಾಕಿದರು. ಬೆಳಗಾವಿಯಲ್ಲಿ ವಿವಿಧ ಹಳ್ಳಿಗಳಿಂದ ತಾಲೂಕುಗಳಿಂದ ಆಗಮಿಸಿದ ಯುವಕ ಯುವತಿಯರು ಅತೀ ಉತ್ಸಾಹದಿಂದ ಸಂಭ್ರಮಿಸಿದರು.