ಉ.ಕ ಸುದ್ದಿಜಾಲ ಕಾಗವಾಡ :

ಕಳೆದ ಒಂದು ವರ್ಷದಿಂದ ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯ ಕಾಗವಾಡ, ಶೇಡಬಾಳ, ಶಿರಗುಪ್ಪಿ, ಮೋಳೆ ಮತ್ತಿತ್ತರ ಗ್ರಾಮಗಳಲ್ಲಿ ರೈತರು ತಮ್ಮ ಜಮೀನಗಳಲ್ಲಿನ ಬಾವಿ ಮತ್ತು ನದಿ ನೀರಾವರಿ ಯೋಜನೆಗಳಿಗೆ ಜೋಡಿಸಿದ ನೀರೆತ್ತುವ ಪಂಪ ಸೆಟ್/ಮೋಟಾರಗಳು ಅವ್ಯಹಾತವಾಗಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನ ಬಂಧಿಸಿದ ಕಾಗವಾಡ ಪೋಲಿಸರು.

ಕಳೆದ ಹಲವಾರು ದಿನಗದ ತೆಲೆನೋವಾಗಿದ್ದ ಪಂಪಸೆಟ್ ಕಳ್ಳರು ಕೊನೆಗು ಕಾಗವಾಡ ಪೋಲಿಸರಿಗೆ ಅತಿಥಿಯಾಗಿದ್ದಾರೆ. ಇದು ರೈತರಿಗೆ ಮತ್ತು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಸದರಿ ಪ್ರಕರಣಗಳನ್ನು ಗಂಭೀರವಾಗ ಪರಿಗಣಿಸಿ ಮಾನ್ಯ ಎಸ್‌ಪಿ ಸಾಹೇಬರು ರವರ ಮಾರ್ಗದರ್ಶನದಲ್ಲಿ ಕಳ್ಳರನ್ನ ಬಂಧಿಸುವಲ್ಲಿ ಕಾಗವಾಡ ಪೋಲಿಸರು ಯಶಸ್ವಿಯಾಗಿದ್ದಾರೆ.

ತನಿಖಾ ತಂಡದ ಕಾರ್ಯಚರಣೆಯಿಂದ ಫೆ. 20 2023 ರಂದು ಸದರಿ ಪ್ರಕರಣಕ್ಕೆ ಸಂಭಂದಿಸಿದಂತೆ 03 ಜನ ಸಾಂಗಲಿ ಮೂಲದ ಅಂತರ ರಾಜ್ಯ ನೀರೆತ್ತುವ ಪಂಪ ಸೆಟ್ ಮೋಟಾರಗಳು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಸುಮಾರು 7 ಲಕ್ಷದ ಮೌಲ್ಯದ 36 ನೀರೆತ್ತುವ ಪಂಪ ಸೆಟ್ /ಮೋಟಾರಗಳು ಮತ್ತು ಸುಮಾರು 1,97,000 ಹಾಗೂ ಕಳ್ಳತನಕ್ಕೆ ಬಳಸಿದ ದ್ವಿಚಕ್ರವಾಹನ ಮತ್ತು ಗೂಡ್ಸ್ ವಾಹನ ಸುಮಾರು 8,97,000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡಿಯಲಾಗಿದೆ.

ಸದರಿ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಮಾರ್ಗದರ್ಶನ ಮಾಡಿದ ಎಸ್ ಡಿ ಜಲ್ಡೆ ಮಾನ್ಯ ಡಿಎಸ್‌ಪಿ ಸಾಹೇಬರು ಅಥಣಿ ವಿಭಾಗ, ಶ್ರೀ ರವೀಂದ್ರ ನಾಯ್ಕಡಿ ಸಿಪಿಐ ಅಥಣಿ ತನಿಖಾಧಿಕಾರಿಗಳಾದ ಎಚ್ ಕೆ ನರಳೆ ಪಿಎಸ್‌ಐ ಕಾಗವಾಡ ಹಾಗೂ ಸಿಬ್ಬಂದಿರವರಾದ ಶ್ರೀ ಬಿ ಎಮ್ ರಿಜಕನ್ನವರ, ಎಎಸ್‌ಐ, ಶ್ರೀ ಜೆ ಎ ಸೊನಾವನೆ ಎಎಸ್‌ಐ ಶ್ರೀ ಆರ್ ಎಸ್ ಬಸ್ತವಾಡ ಇನ್ನಿತರ ಸಿಬ್ಬಂಧಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು,

ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಬೆಳಗಾವಿ ಜಿಲ್ಲಾ ವರಿಷ್ಟಾಧಿಕಾರಿ ಡಾ.ಸಂಜೀವ್ ಪಾಟೀಲ ಅವರು ಪ್ರಶಂಶೆ ವ್ಯಕ್ತಪಡಿಸಿರು.