ಉ.ಕ‌ ಸುದ್ದಿಜಾಲ ರಾಯಬಾಗ :

ಸಂಗೋಳ್ಳಿ ರಾಯಣ್ಣ ಗಲ್ಲಿಗೆರುವ ವೇಳೆ ಹರ ಹರ ಮಹಾದೇವ ಎಂದು ಹೇಳಿದ್ದಾರೆ. ಸದ್ಯ ನಮ್ಮ ತೆಲೆಯಲ್ಲಿ ಹರ ಹರ ಮಹಾದೇವ ಇಲ್ಲ, ನಮ್ಮ ತೆಲೆಯೊಳಗ  ಜೈ ಶ್ರೀರಾಮ ಎಂದು ತುಂಬುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಕುಡಚಿ ಶಾಸಕ ಮಹೇಶ ತಮ್ಮನ್ನವರ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಸಂಗೋಳಿ ರಾಯಣ್ಣ ಜಯಂತಿ ಆಚರಣೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಮಹೇಶ ತಮ್ಮನ್ನವರ ಹರ ಹರ ಮಹಾದೇವಗೆ ಇತಿಹಾಸವಿದೆ, ಜೈ ಶ್ರೀರಾಮಗೆ ಇತಿಹಾಸಿದೆಯಾ ನೀವೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.