ಉ.ಕ ಸುದ್ದಿಜಾಲ ಬೆಳಗಾವಿ :
ಅಧಿವೇಶನ ಕರ್ತವ್ಯ ಬರುವಾಗ ದಾರಿಯಲ್ಲಿ ಕಿಡಿಗೇಡಿಗಳು ಅಡ್ಡಗಟ್ಟಿ ವಾಹನ ಗಾಜು ಒಡೆದಿದ್ದಾರೆಂದು ದೂರು ನೀಡಿದ ಚಾಲಾಕಿ ಚಾಲಕ ಕಿಡಿಗೇಡಿಗಳಿಂದ ಸರ್ಕಾರಿ ವಾಹನ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಟ್ವಿಸ್ಟ್.
ಸುಳ್ಳು ದೂರು ನೀಡಿದ್ದ ಚಾಲಾಕಿ ಚಾಲಕನ ವಿರುದ್ಧವೇ ಎಫ್ಐಆರ್ ದಾಖಲು, ಸುಳ್ಳು ದೂರು ದಾಖಲಿಸಿ ಪ್ರಕರಣ ಬೇರೆಕಡೆ ಸೆಳೆಯಲು ಯತ್ನಿಸಿ ಸಂಚಲನ ಸೃಷ್ಟಿಸಿದ್ದ ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ಬೆಂಗಳೂರಿನ ಅಗ್ರಿಕಲ್ಚರ್ ರೂರಲ್ ಡೆವಲ್‍ಪ್ಮೆಂಟ್ ಬ್ಯಾಂಕಿನ ವಾಹನ ಚಾಲಕ ಚೇತನ್‌ನಿಂದ ಸುಳ್ಳು ದೂರು.
ಅಧಿವೇಶನ ಕರ್ತವ್ಯ ಬರುವಾಗ ದಾರಿಯಲ್ಲಿ ಕಿಡಿಗೇಡಿಗಳು ಅಡ್ಡಗಟ್ಟಿ ವಾಹನ ಗಾಜು ಒಡೆದಿದ್ದಾರೆಂದು ದೂರು ನೀಡಿದ್ದ ಚೇತನ ಆದರೆ ಚಾಲಕನ ಸ್ವಯಂಕೃತ ಅಪರಾಧದಿಂದ ವಾಹನದ ಮುಂಭಾಗದ ಗಾಜು ಪುಡಿಪುಡಿ ಬೆಂಗಳೂರಿನ ಅಗ್ರಿಕಲ್ಚರ್ ರೂರಲ್ ಡೆವಲ್‍ಪ್ಮೆಂಟ್ ಬ್ಯಾಂಕಿಗೆ ಸೇರಿದ್ದ ವಾಹನ.
ಚಾಲಕ ಚೇತನ ಎನ್.ವಿ. ಅಧಿವೇಶನ ಕರ್ತವ್ಯಕ್ಕೆ ಬರುತ್ತಿದ್ದಾಗ ಸ್ಟಿಲ್ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಲಾರಿಯಲ್ಲಿ ಸ್ಟೀಲ್ ಬಾರ್‌ಗಳು ತಾಗಿ ಬುಲೆರೋ ಮುಂಭಾಗದ ಗ್ಲಾಸ್ ಗೆ ಹಾನಿಯಾಗಿತ್ತು. ಧಾರವಾಡ-ಹಿರೇಬಾಗೇವಾಡಿ ಮಾರ್ಗಮಧ್ಯೆ ನಡೆದಿರುವ ನಿನ್ನೆ ಘಟನೆ ಇದು ಮೇಲಾಧಿಕಾರಿಗಳು ತನ್ನಮೇಲೇ ಶಿಸ್ತು ಕ್ರಮ ಜರುಗಿಸ್ತಾರೆಂದು ಸತ್ಯ ಮರೆಮಾಚಿದ್ದ ಚಾಲಕ
ಸುವರ್ಣ ವಿಧಾನಸೌಧ ಬಳಿ ಕೆಲ ಕಿಡಿಗೇಡಿಗಳು ವಾಹನ ಅಡ್ಡಗಟ್ಟಿ ಕಲ್ಲು ತೂರಿ ಗಾಜು ಒಡೆದಿದ್ದಾರೆ ಕಥೆ ಕಟ್ಟಿದ್ದ ಚಾಲಾಕಿ ಚಾಲಕ. ಮರಾಠಿಯಲ್ಲಿ ಮಾತನಾಡುತ್ತ ನನ್ನ ಮೇಲೂ ಹಲ್ಲೆಗೆ ಯತ್ನಿಸಿದ್ದರು ಎಂದು ಕಥೆ ಕಟ್ಟಿದ್ದ ಚಾಲಕ ಚೇತನ್ ಈ ಸಂಬಂಧ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ನೀಡಿದ್ದ ಚೇತನ.
ಸುವರ್ಣ ಸೌಧಕ್ಕೆ ಬರುವ ಮುಂಚೆನೇ ವಾಹನ ಗ್ಲಾಸ್ ಒಡೆದಿರುವುದು ಬೆಳಕಿಗೆ ಹಿರೇಬಾಗೇವಾಡಿ ಟೋಲ್ ನಾಕಾ ಸಿಸಿಟಿವಿ ಕ್ಯಾಮರಾದಲ್ಲೂ ವಾಹನದ ಗಾಜು ಒಡೆದಿರುವುದು ಸೆರೆ ಪ್ರಕರಣ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿದ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ. ಚಾಲಕ ಹೇಳುವ ಕಥೆಗೂ ನಡೆದ ಘಟನೆಗೂ ವ್ಯತ್ಯಾಸ.