ಉ.ಕ ಸುದ್ದಿಜಾಲ ಅಥಣಿ :

ಸವದಿ ಸ್ವಾಭಿಮಾನ ಬಿಟ್ಟು ಬಿಜೆಪಿಗೆ ಬರ್ತಾರಾ? ಕುಮಠಳ್ಳಿ ಲೇವಡಿ ಶಾಸಕ ಲಕ್ಷ್ಮಣ ಸವದಿ ರಾಜಕೀಯ ಬದ್ಧ ವೈರಿ ರಮೇಶ ಜಾರಕಿಹೋಳಿ ಶಿಷ್ಯ ಅಥಣಿ ಮಾಜಿ ಶಾಸಕ ಮಹೇಶ ಕುಮಠಳ್ಳಿ ಲಕ್ಷ್ಮಣ ಸವದಿ ಅವರಿಗೆ ಲೇವಡಿ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕ ಮಹೇಶ ಕುಮಟಳ್ಳಿ ಲಕ್ಷ್ಮಣ ಸವದಿ ಬಿಜೆಪಿ ಪ್ರವೇಶ ವಿಚಾರವಾಗಿ ಮಾತನಾಡಿದ ಕುಮಠಳ್ಳಿ  ಸವದಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದರು.

ನಾನು ಸತ್ತರೂ ಬಿಜೆಪಿ ಕಚೇರಿ ಎದುರು ನನ್ನ ಹೆಣ ಸಹಿತ ಹೋಗೋದಿಲ್ಲ ಅಂದಿದ್ದಾರೆ. ಆದರೆ, ಈ ಎಲ್ಲಾ ವಿಚಾರಗಳನ್ನ ಬಿಜೆಪಿ ವರಿಷ್ಠರು ಮರೆತು ಬುಲಾವ್ ನೀಡಿದರೆ,  ಲಕ್ಷ್ಮಣ ಸವದಿ ಎಲ್ಲಾ ಸ್ವಾಭಿಮಾನ ಬಿಟ್ಟು ಬರಬೇಕಲ್ಲ ಎನ್ನುವುದು ಅವರನ್ನೇ ಕೇಳಿ ಎಂದು ಕಾಲೆಳೆದಿದ್ದಾರೆ.