ಉ.ಕ ಸುದ್ದಿಜಾಲ ಖಾನಾಪೂರ :

ತಾಯಿಗೆ ಹುಷಾರಿಲ್ಲ, ಈ ಕಡೆ ಕೈಯಲ್ಕಿ ಕೆಲಸವಿಲ್ಲ ತಾಯಿ ಊಟಕ್ಕಾಗಿ ಹಲವು ಕಡೆಗಳಲ್ಲಿ ಸಹಾಯ ಕೇಳಿದ್ದರು ಯಾರು ಕೂಡಾ ಸಹಾಯ ಮಾಡದೇ ಇರೋ ಸಂದರ್ಭದಲ್ಲಿ ಬೇಸತ್ತು ಆತ್ಮಹತ್ಯೆ ಮಾಡಕೊಂಡ ಮಗ.

ಬೆಳಗಾವಿ ಜಿಲ್ಲೆಯ ಖಾನಾಪುರದ ಲಿಂಗನಮಠ ಗ್ರಾಮದಲ್ಲಿ ಈ  ಘಟನೆ ನಡೆದಿದೆ. ಬಸವರಾಜ ವೆಂಕಪ್ಪ(30) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಬಸವರಾಜ ಮೂಲತಃ ಹಾವೇರಿ ಜಿಲ್ಲೆಯ ಯಲಗುಚ್ಚು ಗ್ರಾಮದವನು.

ಬಸವರಾಜ್ ಕೂಲಿಗಾಗಿ ಗೋವಾ ರಾಜ್ಯಕ್ಕೆ ತಾಯಿ ಜೊತೆಗೆ ವಲಸೆ ಹೋಗಿದ್ದನು. ಸರಿಯಾದ ಕೂಲಿ ಕೆಲಸ ಸಿಗದ ಹಿನ್ನೆಲೆಯಲ್ಲಿ ರೈಲಿನ ಮೂಲಕ ತನ್ನ ಊರಿಗೆ ವಾಪಸ್ ಆಗುತ್ತಿದ್ದ ದಾರಿ ಮಧ್ಯದಲ್ಲಿ ರೈಲು ಅಧಿಕಾರಿಯು ಟಿಕೆಟ್ ಇಲ್ಲದ ಕಾರಣಕ್ಕೆ ತಾಯಿ, ಮಗನನ್ನು ಅಳ್ನಾಳವರ್ ಬಳಿ ಇಳಿಸಿದ್ದಾರೆ.

ನಾಲ್ಕು ದಿನಗಳಿಂದ ಸರಿಯಾದ ಊಟ ಸಿಗದೇ ನಿತ್ರಾಣಗೊಂಡಿದ್ದ ತಾಯಿ ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಸವರಾಜ.

ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸವರಾಜ್ ತಾಯಿ ಶಾಂತವ್ವ ಅನಾಥ ಆಶ್ರಮಕ್ಕೆ ಸೇರಿಸಿದ ಅಧಿಕಾರಿಗಳು.