ಉ.ಕ ಸುದ್ದಿಜಾಲ ಕಾಗವಾಡ :

ಐನಾಫೂರ ಪಟ್ಟಣದ ಗ್ರಾಮ ದೇವತೆ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಮಂಗಳವಾರ ದಿ.14 ರಿಂದ 18 ರ ವರೆಗೆ ವಿವಿಧ ಕಾರ್ಯಕ್ರಮಗಳಿಂದ ಅದ್ದೂರಿಯಾಗಿ ಜರುಗಲಿದೆ.

ಜಾತ್ರೆಯ ನಿಮಿತ್ಯವಾಗಿ ದನಗಳ ಜಾತ್ರೆ ಹಾಗೂ ಬೃಹತ್ ಕೃಷಿ ಪ್ರದರ್ಶನ ಕಾರ್ಯಕ್ರಮ ನೆರವೇರಲಿದೆ. ಬುಧವಾರ ದಿ.15 ರಂದು ಬೆಳಿಗ್ಗೆ ಶ್ವಾನ ಪ್ರದರ್ಶನ, ಅದೇ ದಿನ‌ ಜೋಡು ಕುದುರೆಗಳ ಗಾಡಿ ಶರತ್ತು ಹಮ್ಮಿಕೊಳ್ಳಲಾಗಿದೆ. ಗುರವಾರ ದಿ‌16 ರಂದು ಸಂಗ್ರಾಮಕ್ಕೆ ಕಲ್ಲು ಎತ್ತುವ ಸ್ಪರ್ಧೆ ಅದೇ ದಿನ‌ ಮಧ್ಯಾಹ್ನ ಗುಂಡು ಎತ್ತುವ ಸ್ಪರ್ಧೆ ಜೆರುಗಲಿದೆ.

ಶುಕ್ರವಾರ ದಿ.17 ರಂದು ಒಂದು ಕುದುರೆ ಒಂದು ಎತ್ತಿನ ಗಾಡಿ ಶರತ್ತು, ಶನಿವಾರ ದಿ.18 ರಂದು ಬೆಳಿಗ್ಗೆ ಜೋಡು ಎತ್ತಿನ ಗಾಡಿ ಶರತ್ತು ಹಮ್ಮಿಕೊಳ್ಳಲಿದ್ದು ಪ್ರಥಮ ಬಹುಮಾನ ಶಾಸಕ ರಾಜು ಕಾಗೆ ಇವರಿಂದ 1,00,000 ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.

ಅದೇ ರೀತಿ ಮಾಜಿ ಸಚಿವ ಶ್ರೀಮಂತ ಪಾಟೀಲರು ಜಾತ್ರೆಯ ನಿಮಿತ್ಯ ವಿವಿಧ ಅಭಿವೃದ್ಧಿ ಹಾಗೂ ಅವಶ್ಯಕ ಇರುವ ಸೇವೆಗಾಗಿ 1,00,000 ರೂಪಾಯಿ ಘೋಷಣೆ ಮಾಡಿದ್ದಾರೆ.

ಜೋಡು ಎತ್ತಿನ ಗಾಡಿ ಶರತ್ತಿನ ದ್ವಿತೀಯ ಬಹುಮಾನ ಶಿರಗುಪ್ಪಿ ಶುಗರ್ಸ ವರ್ಕ ಅಧ್ಯಕ್ಷ ಕಲ್ಲಪ್ಪಣ್ಣ ಮಗ್ಗೆಣ್ಣವರ 60,000 ರೂಪಾಯಿ ನೀಡುವ ಘೋಷಣೆ ಮಾಡಿದ್ದಾರೆ. ಮಹಾಲಕ್ಷ್ಮಿ ವೈನ್ಸ್ ಮಾಲೀಕ ಈರಣ್ಣಾ ಬಾಗಾದಿ 30,000 ರೂಪಾಯಿ ನೀಡುವ ಘೋಷಣೆ ಮಾಡಿದ್ದಾರೆ. ಚತುರ್ಥ ಬಹುಮಾನ ಮಹಾವೀರ ಬ್ಯಾಳಿ 10,000 ರೂಪಾಯಿ ನೀಡುವ ಘೋಷಣೆ ಮಾಡಿದ್ದಾರೆ.

ಐದು ದಿನ ಜರಗುವ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಲಕ್ಷಾಂತ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಜಾತ್ರಾ ಕಮೀಟಿ ಅಧ್ಯಕ್ಷ ಶುಭಾಸ ಪಾಟೀಲ ಹಾಗೂ ಪಟ್ಟಣ ಪಂಚಾಯತಿ ಅಧ್ಯಕ್ಷ ಸರೋಜನಿ ಸುರೇಶ ಗಾಣಿಗೇರ ತಿಳಸಿದ್ದರು.