ಉ.ಕ ಸುದ್ದಿಜಾಲ ಕಾಗವಾಡ :
ಹಲವಾರಿ ಟಿಕೇ್ಗಳ ನಡುವೆ ಸರ್ಕಾರ ಬಸ್ ಟಿಕೇಟ್ ದರ 15% ಏರಿಕೆಬಮಾಡಲು ಮುಂದಾಗಿದ್ದು ಬಸ್ ಟಿಕೇಟ್ ಕೆಲ ವರ್ಷಗಳ ಹಿಂದೆ ಏರಿಕೆಯಾಗಬೇಕಿತ್ತು ಈಗ ಏರಿಕೆಯಾಗಿದೆ ಎಂದು ಸರ್ಕಾರ ಬಸ್ ಟಿಕೇಟ್ ದರ ಏರಿಕೆಯನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಅಧ್ಯಕ್ಷ ರಾಜು ಕಾಗೆ ಸಮರ್ಥಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ರಾಜು ಕಾಗೆ ರಾಜ್ಯದಲ್ಲಿ ಕಳೆದ ಎಳೆಂಟು ವರ್ಷಗಳಿಂದ ಬಸ್ ಟಿಕೇಟ್ ದರ ಏರಿಕೆಯಾಗಿಲ್ಲ. ಡಿಸೇಲ್, ಆಯಿಲ್, ಟಾಯರ ಹಾಗೂ ಬಿಡಿ ಭಾಗಗಳ ದರ ಏರಿಕೆಯಾಗಿದೆ.
ಹೀಗಾಗಿ ಸರ್ಕಾರ ಅನಿವಾರ್ಯವಾಗಿ ಟಿಕೇಟ್ ದರ ಏರಿಕೆ ಮಾಡಲಾಗಿದೆ ಪ್ರತಿ ದಿನ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಒಂದು ಕೋಟಿ ಹಾನಿಯಲ್ಲಿದೆ. ಹೊಸ ಬಸ್‌ಗಳನ್ನ ಈಗಾಗಕೇ ಖರೀದಿ ಮಾಡಿದ್ದೇವೆ. ಕಳೆದ ಐದಾರು ವರ್ಷಗಳಿಂದ ಬಸ್ ಖರೀದಿ ಮಾಡಿಲ್ಲ. ಈಗ ಐದನೂರು ಹೊಸ ಬಸ್ ಖರೀದಿ ಮಾಡಿದ್ದೇವೆ.
ಜನರ ಸೇವೆಗೆ ಬಸ್ ಖರೀದಿ ಮಾಡಿದಾಗ ಬಸ್ ಟಿಕೇಟ್ ದರ ಏರಿಕೆ ಮಾಡುವುದು ಅನಿವಾರ್ಯ ಡಿಸೇಲ್ 50ರೂ ಇದ್ದಾಗ ಇದ್ದ ಟಿಕೇಟ್ ದರ ಇದೇ ಇತ್ತು ಆದರೆ, ಈಗ ಡಿಸೇಲ್ ದರ ಏರಿಕೆ ಯಾಗಿದೆ. ಹೀಗಾಗಿ 15% ಟಿಕೇಟ್ ದರ ಏರಿಕೆ ಮಾಡಿದ್ದೇವೆ
ಇಷ್ಟು ದರ ಏರಿಕೆ ಮಾಡಿದರೂ ಕೂಡಾ ನಾವು ಪ್ರಾಪೀಟ್ ನಲ್ಲಿ ಇಲ್ಲ. ಕಳೆದ ಬಿಜೆಪಿ ಸರ್ಕಾರ ಕೆಎಸ್‌ಆರ್‌ಟಿಸಿ ಯನ್ನು ಲಾಸ್ ಮಾಡಿದ್ದಾರೆ. ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕಾಗವಾಡ ಶಾಸಕ ವಾಯುವ್ಯ ರಸ್ತೆ ಸಾರಿಗೆ ಅಧ್ಯಕ್ಷ ರಾಜು ಕಾಗೆ ಹೇಳಿದ್ದಾರೆ.