ಉ.ಕ ಸುದ್ದಿಜಾಲ ಚಿಕ್ಕೋಡಿ :

ನಾಳೆ ಚಿಕ್ಕೋಡಿ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಜಾರಕಿಹೊಳಿ ನಾಮಪತ್ರ ಸಲ್ಲಿಸಲಿದ್ದಾರೆ. ಸ್ಥಳೀಯ ನಾಯಕರನ್ನು ಹೊರತುಪಡಿಸಿದ್ರೆ ರಾಜ್ಯದ ಯಾವ ನಾಯಕರು ನಾಮಪತ್ರ ಸಲ್ಲಿಕೆಗೆ ಭಾಗಿಯಾಗಲ್ಲ ಎಂದು ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು,ಶಾಸಕ ಯತ್ನಾಳ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸತೀಶ ಜಾರಕಿಹೊಳಿ. ರಾಜಕೀಯ ಅಂದ್ರೇನೆ ಹಾಗೆ.


ನಮ್ಮ ಮೇಲೆ ಅವರು ಆರೋಪ ಮಾಡ್ತಾರೆ. ಅವರ ಮೇಲೆ ನಾವು ಅರೋಪ ಮಾಡೋದು ಸಹಜ. ಚುನಾವಣೆ ಸಂದರ್ಭದಲ್ಲಿ ಇದೇನಾ ಕಾಮನ್ ಎಂದ ಸತೀಶ ಜಾರಕಿಹೋಳಿ.

ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಜಾರಕಿಹೊಳಿ ನಾಮಪತ್ರ ಬಗ್ಗೆ ಸತೀಶ ಜಾರಕಿಹೋಳಿ ಮಾತು

ಲೀಡ್ ನೀಡದಿದ್ರೆ ಸಚಿವ ಸ್ಥಾನ ತೊರಯಬೇಕಾಗುತ್ತದೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಈ ರೀತಿ ಯಾವಾಗ್ಲಾದ್ರೂ ಆಗಿದೇಯಾ..? ಚುನಾವಣೆಯಲ್ಲಿ ಸೋತಾಗ ಸಚಿವ ಸ್ಥಾನಕ್ಕೆ ಯಾರಾದ್ರೂ ರಾಜೀನಾಮೆ ನೀಡಿದ್ದಾರೆಯೇ..?

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಈ ಹಿಂದೆ ಯಾರೂ ಮಾಡಿಲ್ಲ, ಈಗಲೂ ಮಾಡಲ್ಲ. ಲೀಡ್ ನೀಡದಿದ್ರೆ ಸಚಿವ ಸ್ಥಾನ ತೊರೆಯಬೇಕು ಎನ್ನುವ ಪ್ರಶ್ನೆ ಅನವಶ್ಯಕ ಎಂದ ಸಚಿವ ಜಾರಕಿಹೊಳಿ.

ಕಾಂಗ್ರೆಸ್‌ ಕುಟುಂಬ ರಾಜಕಾರಣಕ್ಕೆ ಒತ್ತು ನೀಡುತ್ತೆ ಎನ್ನುವ ವಿಚಾರ ಹಾಗಿದ್ರೆ ಹಾದಿ ಬೀದಿಲಿ ಹೋಗುವವರನ್ನು ಕರದು ಟಿಕೆಟ್ ಕೊಡ್ಬೇಕಾ…? ಅದೇನು ಗ್ರಾ.ಪಂ ಚುನಾವಣೆಯಾ..? ಒಂದು ಸಾವಿರ ಮತಗಳಿವೆ ಎಂದು ಅವರಿಗೆ ಟಿಕೆಟ್ ನೀಡೋಕೆ ಆಗುತ್ತಾ..? ನಾವು ಮುಂಚೆನೆ ಹೇಳಿದ್ದೇವೆ.

ಅವರು ಪಾಪ್ಯುಲರ್ ಆಗಿರಬೇಕು, ಸಮುದಾಯ ಒಪ್ಪಬೇಕು ಪಕ್ಷ ಒಪ್ಪಬೇಕು. ನಾವು ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂದು ಬಹಳ ಪ್ರಯತ್ನಿಸಿದ್ದೇವು. ಆದರೆ ಯಾವುದೇ ಸಮರ್ಥರು ನಮಗೆ ಸಿಗಲಿಲ್ಲ.

ಸ್ಥಳೀಯ ಶಾಸಕರು ಹಾಗೂ ಪಕ್ಷದವರು ನಮಗೆ ಚುನಾವಣೆ ಸ್ಪರ್ಧಿಸುವಂತೆ ಹೇಳಿದ್ರು. ಚಿಕ್ಕೋಡಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ.