ಉ.ಕ ಸುದ್ದಿಜಾಲ ವಿಜಯಪುರ :

ಕಾರು ಪಲ್ಟಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು, ಮೂವರಿಗೆ ಗಾಯ. ಮಾಜಿ ಸೈನಿಕ ಕಾರು ಅಪಘಾತದಲ್ಲಿ ಸಾವು. ಅಳಿಯ ಅತ್ತೆ ಕಾರು ಅಪಘಾತದಲ್ಲಿ ಸಾವು. ಢವಳಗಿ ಬಳಿ ಪಲ್ಟಿ ಹೊಡೆದು ಜಮೀನಿಗೆ ನುಗ್ಗಿದ ಕಾರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಬಳಿ ಅಪಘಾತ. ಮಾಜಿ ಸೈನಿಕ ದೊಡ್ಡಯ್ಯ ಪುರಾಣಿಕಮಠ (37) ಅತ್ತೆ ಪುಷ್ಪಾವತಿ ( 55) ಮೃತ ದುರ್ದೈವಿಗಳು.

ಕಳೆದ ನಾಲ್ಕು ದಿನಗಳ ಹಿಂದಷ್ಟೇ ಸೇನೆಯಿಂದ ನಿವೃತ್ತಿ ಹೊಂದಿದ್ದ ಮೃತ ದೊಡ್ಡಯ್ಯ ಪುರಾಣಿಕಮಠ. ಮೃತರು ಮೂಲತಃ ವಿಜಯಪುರ ಜಿಲ್ಲೆಯ ಮಸಬನಾಳ ಗ್ರಾಮದವರು.

ಹೆಂಡತಿ ಎರಡು ಮಕ್ಕಳ ಹಾಗೂ ಅತ್ತೆ ಜೊತೆ ಢವಳಗಿಯಿಂದ ಮುದ್ದೇಬಿಹಾಳಕ್ಕೆ ತೆರಳುವಾಗ ದುರ್ಘಟನೆ. ಗಾಯಾಳುಗಳಿಗೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.