ಉ.ಕ ಸುದ್ದಿಜಾಲ ಅಥಣಿ :

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುತಿದ್ದಾರೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಮಹಿಳೆಯರ ಸಾಧನೆ ಸಾಕಷ್ಟಿದೆ. ಅಥಣಿಯ ಸೃಷ್ಟಿ ಸಚಿನ್ ಬಕಾಲಿ ರಸಾಯನಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಎರಡು ಚಿನ್ನದ ಪದಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದು, ಇತರವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. 

ಸೃಷ್ಟಿ ಬಕಾಲಿ ಎರಡು ಬಂಗಾರ ಪದಕ ತಮ್ಮದಾಗಿಸಿಕೊಂಡ ವಿದ್ಯಾರ್ಥಿನಿ

ಬೆಳಗಾವಿ ಜಿಲ್ಲೆ  ಅಥಣಿ ಪಟ್ಟಣದ ಪ್ರತಿಭಾನ್ವಿತ ವಿದ್ಯಾರ್ಥಿನಿ ಅಕ್ಕಮಹಾದೇವಿ ವಿಶ್ವವಿದ್ಯಾಲಯದಿಂದ 2024ರ ಮಾರ್ಚ್ ನಲ್ಲಿ ಜರುಗಿದ ಘಟಿಕೋತ್ಸವ ಪದವಿ  ಪ್ರಧಾನ ಸಮಾರಂಭದಲ್ಲಿ ಸ್ನಾತಕೋತ್ತರ(MSC In  chemistry) ರಸಾಯನ ಶಾಸ್ತ್ರದಲ್ಲಿ ಅಥಣಿಯ ಅಪ್ಪಟ ಪ್ರತಿಭೆ ಸೃಷ್ಟಿ ಸಚಿನ ಬಕಾಲಿಯವರು ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಶಿವಯೋಗಿ ನೆಲದ ಸತ್ವಕ್ಕೆ  ಸಾಕ್ಷಿಯಾಗಿದ್ದಾರೆ.

ಚಿಕ್ಕಂದಿನಿಂದಲೇ ಪ್ರತಿಭಾವಂತೆಯಾದ ಇವಳು ಓದುವುದರಲ್ಲಿ ಅಷ್ಟೇ ಅಲ್ಲದೆ ಅತ್ಯುತ್ತಮ ಭಾಷಣಕಾರ್ತಿ, ಅತ್ಯುತ್ತಮ ಪ್ರಬಂಧ ಬರಹಗಾರ್ತಿ, ಚರ್ಚಾಕೂಟದಲ್ಲಿ ಎತ್ತಿದ ಕೈ ಅಲ್ಲದೆ  ಹಲವಾರು ಸಾಂಸ್ಕೃತಿಕ ಸ್ಪರ್ಧೆ ಗಳಲ್ಲಿ ರಾಜ್ಯಮಟ್ಟದ ಬಹುಮಾನ ಪಡೆದ ಪ್ರತಿಭಾನ್ವಿತೆ ಇವಳು.

ಸದ್ಯಕ್ಕೆ ಹೆಣ್ಣು ಮಕ್ಕಳೆಂದರೆ ಮೂಗುಮುರಿಯುವ ಲಿಂಗತಾರತಮ್ಯ ಮಾಡುವ ಕಾಲದಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಿಗಿಂತಲೂ ಮಿಗಿಲಾಗಿ ಬೆಳೆಸಿದವರು ಸಚಿನ್ ಬಕಾಲಿ ದಂಪತಿಗಳು.

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುತಿದ್ದಾರೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಮಹಿಳೆಯರ ಸಾಧನೆ ಸಾಕಷ್ಟಿದೆ. ಅಥಣಿಯ ಸೃಷ್ಟಿ ಸಚಿನ್ ಬಕಾಲಿ ರಸಾಯನಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಎರಡು ಚಿನ್ನದ ಪದಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದು, ಇತರವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ 