ಉ.ಕ ಸುದ್ದಿಜಾಲ ಚಿಕ್ಕೋಡಿ :
ಚಿಕ್ಕೋಡಿ ಲೋಕಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂಪಡೆಯುವ ಅವಧಿ ಸೋಮವಾರ ಮುಕ್ತಾಯವಾಗಿದ್ದು ಒಟ್ಟಾರೆ 2 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ ತೆಗೆದುಕೊಳ್ಳುವ ಮೂಲಕ ಅಂತಿಮ ಕಣದಲ್ಲಿ 18 ಅಭ್ಯರ್ಥಿಗಳು ಉಳಿದಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾದ ರಾಜು ಸೊಲ್ಲಾಪುರೆ ಹಾಗೂ ಇಸ್ಮಾಯಿಲ್ ಮಗದುಮ ಅವರುಗಳು ತಮ್ಮ ಉಮೇದುವಾರಿಕೆಯನ್ನು ಇಂದು ಹಿಂಪಡೆದಿದ್ದಾರೆ.
ಭಾರತೀಯ ಜನತಾ ಪಾರ್ಟಿಯಿಂದ ಅಣ್ಣಸಾಹೇಬ.ಎಸ್.ಜೊಲ್ಲೆ, ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ, ಸರ್ವ ಜನತಾ ಪಾರ್ಟಿ ಪಕ್ಷದಿಂದ ಅಪ್ಪಾಸಾಹೇಬ ಕುರಣೆ, ಕರ್ನಾಟಕ ರಾಷ್ಟç ಸಮಿತಿ ಪಕ್ಷದಿಂದ ಕುಮಾರ ಡೊಂಗರೆ, ಬಹುಜನ ಭಾರತ ಪಾರ್ಟಿಯಿಂದ ಪವನಕುಮಾರ ಬಾಬುರಾವ ಮಾಳಗೆ, ಭಾರತೀಯ ಜವಾನ ಕಿಸಾನ ಪಾರ್ಟಿಯಿಂದ ಸತ್ಯಪ್ಪ ದಶರಥ ಕಾಳೇಲಿ,
ಪಕ್ಷೇತರ ಅಭ್ಯರ್ಥಿಗಳಾದ ಕಾಡಯ್ಯ ಶಂಕರಯ್ಯ ಹಿರೇಮಠ, ಕಾಶಿನಾಥ ಕುರಣಿ, ಗಜಾನನ ಪೂಜಾರಿ, ಜಿತೇಂದ್ರ ಸುಭಾಷ ನೇರ್ಲೆ, ಭೀಮಸೇನ ಸನದಿ, ಮಹೇಶ ಅಶೋಕ, ಮೋಹನ ಮೊಟನ್ನವರ, ಯಾಸೀನ ಶಿರಾಜುದ್ಧಿನ ಪಟಕಿ, ವಿಲಾಸ ಮಣ್ಣೂರ,
ಶಂಭು ಕಲ್ಲೋಳಿಕರ, ಶ್ರೀಣಿಕ ಅಣ್ಣಾಸಾಹೇಬ ಜಂಗಟೆ, ಸಮ್ಮೇದ ಸರದಾರ ವರ್ಧಮಾನೆ ಅವರುಗಳ ಅಂತಿಮವಾಗಿ ಕಣದಲ್ಲಿದ್ದು, ಮೇ 7 ರಂದು ಮತದಾನ ನಡೆಯಲಿದೆ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ಅವರು ತಿಳಿಸಿದ್ದಾರೆ.