ಉ.ಕ ಸುದ್ದಿಜಾಲ ವಿಜಯಪುರ :

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ಶಿವಾನಂದ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆಮ ವಿಜಯಪುರ‌ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಶಿವಾನಂದ ಪಾಟೀಲ್ ಭಾಷಣ.

ಭಾಷಣದಲ್ಲಿ ಯತ್ನಾಳ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಶಿವಾನಂದ ಪಾಟೀಲ್. ವಿಜಯಪುರದಲ್ಲಿ ಒಬ್ಬ ಬಿಜೆಪಿ ಸ್ಟಾರ್ ಪ್ರಚಾರಕರಿದ್ದಾರೆ. ದೀಪ ಆರುವಾಗ ಬಹಳ ಉರಿಯುತ್ತದೆ. ಹಂಗಾಗಿದೇ ಅವರ ಪರಿಸ್ಥಿತಿ. ಮಂಗನಿಗೆ ದಾರು( ಮದ್ಯ) ಕುಡುದಂತೆ ಬೈಯ್ಯುತ್ತಾರೆ. ಅವರ ಮಾತಿಗೆ ಹಿಡಿತವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆಯಲ್ಲಿ ಯತ್ನಾಳ್ ತಮ್ಮ ವಿರುದ್ಧ ಮಾತನಾಡಿದ್ದು ಉಲ್ಲೇಖಿಸಿ ಸಚಿವ ಶಿವಾನಂದ ಪಾಟೀಲ ಟಾಂಗ್ ನೀಡಿದ್ದಾರೆ. ನಾನು ಸಕ್ಕರೆ ಕಾರ್ಖಾನೆಗಳಿಂದ ಒಂದೇ ಒಂದು ರೂಪಾಯಿ ತಿಂದಿದ್ದರೆ ಸಾಬೀತು ಪಡಿಸಿದರೆ ರಾಜಕೀಯದಿಂದ ನಿವೃತ್ತರಾಗುತ್ತೇನೆ. ಯತ್ನಾಳ್ ಗೆ ಸವಾಲು ಹಾಕಿದ ಸಚಿವ ಶಿವಾನಂದ ‌ಪಾಟೀಲ್…

ಯತ್ನಾಳ್ ಗೆ ರಾಜಕೀಯ ಪುನರ್ಜನ್ಮ ಯಾರು ನೀಡಿದ್ದಾರೆ ಎಂಬುದನ್ನು ಸ್ಮರಿಸಲಿ. ನಾಳೆಯೇ ವಿಜಯಪುರದಿಂದ ಇಬ್ಬರೂ ಸ್ಪರ್ಧಿಸೋಣ. ನಾನು ಅವನಿಗಿಂತ ಒಂದು‌ ಮತವನ್ನಾದರೂ ಹೆಚ್ಚಿಗೆ ಪಡೆಯುತ್ತೇನೆ.

ಒಂದೇ ಒಂದು ಮತ ಕಮ್ಮಿ ಪಡೆದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇದಕ್ಕೆ ಯತ್ನಾಳ್ ತಯಾರಿದ್ದಾರಾ ಎಂದು ಸವಾಲು ಹಾಕಿದ ಶಿವಾನಂದ ಪಾಟೀಲ್.