ಉ.ಕ ಸುದ್ದಿಜಾಲ‌ ಹಾಸನ :

ಕಣ್ಣೀರು ಹಾಕಿದ‌ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು. ಸಕಲೇಶಪುರ ವಿಧಾನಸಭಾ ಕ್ಷೇತ್ರದ ಸತ್ತಿಗರಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದ ಪ್ರಚಾರ ಸಭೆಯಲ್ಲಿ ಕಣ್ಣೀರಿಟ್ಡ ಗೌಡರು.

ನಾನು ಡ್ರಿಪ್ ಇರಿಗೇಷನ್ ಟ್ರ್ಯಾಕ್ಟರ್ಗೆ, ಟಿಲ್ಲರ್ಗೆ ಸಬ್ಸಿಡಿ ಕೊಟ್ಟಿದ್ದೆ. ಚಿಕ್ಕಬಳ್ಳಾಪುರದಲ್ಲಿ ಮೋದಿಗೆ ನಾನು ಹೇಳಿದೆ ನಮ್ಮ ರಾಜ್ಯದ ನೀರು ಇವತ್ತು ಕಾವೇರಿ ನೀರನ್ನ ಸ್ಟಾಲಿನ್ ಕೊಡೊದಿಲ್ಲ ಅಂತಾನೆ. ನೀವು 28ಕ್ಕೆ 28 ಗೆಲ್ಸಿ ಅಮೇಲೆ ನೋಡ್ತಿನಿ ನಾನು ಇದು ಕೇವಲ ಹಾಸನ ಲೋಕಸಭಾ ಪ್ರಶ್ನೆಅಲ್ಲ 28 ಗೆಲ್ಲಬೇಕು.

ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡರ ಭಾಷಣ

ನನ್ನ ಮನಸ್ಸಲ್ಲಿ ನೋವಿದೆ ಇಲ್ಲಿ 20 ಹಳ್ಳಿಜನ ಸೇರಿದ್ದೀರಿ ನಮ್ಮ ಗೌಡ ಬರ್ತಾನೆ ಏನಾದ್ರು ಮಾಡ್ತಾನೆ ಅಂತ‌ ಮೋದಿ ಜೊತೆ ಕೂತು ಪೋಟೋ ತೆಗೆಸಿಕೊಳ್ಳದಲ್ಲ. ನಿಮ್ಮನ್ನ ನೋಡಿದಾಗ ನನಗೆ ತುಂಬಾ ನೋವಿದೆ.

ತಾಯಿ ಹೂಕೊಟ್ಟಿತು ಅಂತ ಅರ್ಚಕ ಕೊಟ್ಟಿದ್ದಾರೆ ಜೇಬಲಿ ಇಟ್ಕೊಂಡಿದಿನಿ ನಾನು.ಬನಿಮ್ಮನ್ನ ಗೆಲ್ಲಿಸ್ತಿವಿ ಅಂತ ಬಂದಿರೋ ಪುಣ್ಯಾತ್ಮರು ನೀವು ನಿಮಗೆ ಸಾಷ್ಟಾಂಗ ನಮಸ್ಕಾರ. ಉಳಿದ ಇನ್ನೆರಡು ವರ್ಷ ಬದುಕಬಹುದು.

ನಾನು ಏನು ಮಾಡಬೇಕು ಅನ್ನೊದು ನಿತ್ಯ ತಲೆ ಒಳಗೆ ಯೋಚನೆ ಮಾಡ್ತಿನಿ ಬಿಡದಿಲ್ಲ ನಾನು. ಆ ಮನುಷ್ಯ ಸುಮಾರು 400 ಸೀಟು ಅಂತಾರೆ ಅವ್ರು ಪ್ರಧಾನ ಮಂತ್ರಿ ಆಗೋದು ನೂರಕ್ಕೆ ನೂರು ಸತ್ಯ. ಅವ್ರ ಕೈಹಿಡಿದು ಬರೆಸೋ ಶಕ್ತಿ ಇದೆ ನನಗೆ,ಏನು ಮಾಡಬೇಕು ಯಾವಥರ ಮಾಡಬೇಕು.

ಈ ಭಾಗಕ್ಕೆ ಹೇಗೆ ನಿಮ್ಮನ್ನ ಬದುಕಲಿಕ್ಕೆ ಮಾರ್ಗ ಕಲ್ಪಿಸಿಬೇಕು ಅನ್ನೊದನ್ನ ಮಾಡಿ ನನ್ನ ಕೊನೆ ಉಸಿರು ಎಳಿಬೇಕು ಅನ್ನೊ ಹಠ ಇದೆ ನನಗೆ. ನಾನು ಯಾವಾಗಲೋ ಸಾಯಬೇಕಿತ್ತು ಆದರೆ ಬದುಕಿದೆ ನನಗೆ ಮೂರು ವರ್ಷ ಕಿಡ್ನಿ ಪೇಲ್ ಆಗಿ ಮಣಿಪಾಲ್ ಆಸ್ಪತ್ರೆ ಲಿ ನನ್ನ ಅಳಿಯ ಡಾ ಮಂಜುನಾಥ್, ಡಾ. ಬಲ್ಲಾಳ್ ಸೇರಿ ಮೂರು ವರ್ಷದಲ್ಲಿ ಬದುಕಿಸಿದ್ರು ನಿಮ್ಮ ನೋಡೋ ಸೌಭಾಗ್ಯ ಅಂತಾ ಅತ್ತ ದೊಡ್ಡ ದೇವೇಗೌಡ್ರು