ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ‌ ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ದೊಡ್ಡ ಆಘಾತಕರವಾದ ಘಟನೆಯೊಂದು ನಡೆದಿತ್ತು. ಟೆನ್ಸನ್ ನಲ್ಲಿ ಓಡಾಡುತ್ತಿರೋ ಆಸ್ಪತ್ರೆ ಸಿಬ್ಬಂದಿಗಳು. ಗುಂಪುಗುಂಪಾಗಿ ಸೇರಿರೋ ಜನರು. ಪೊಲೀಸ್ ಸಿಬ್ಬಂದಿಗಳ ಮುಂದೆ ತಮ್ಮ ಅಳಲನ್ನು ತೊಡಿಕೊಳ್ಳುತ್ತಿರುವ ಮಹಿಳೆ. ತನ್ನ ಗಂಡು ಮಗುವನ್ನ ಕಳೆದುಕೊಂಡು ದಿಗ್ಭ್ರಾಂತಗೊಂಡಿರೋ ತಾಯಿ…! ಹೌದು ಈ ಎಲ್ಲ ಮನಕಲಕುವ ದೃಶ್ಯಾವಳಿಗಳು ಕಂಡು ಬಂದದ್ದು ಅಥಣಿ ತಾಲೂಕು ಆಸ್ಪತ್ರೆಯಲ್ಲಿ.

ಬೆಳಗಾವಿ‌ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಅಂಬಿಕಾ ಅಮೀತ ಭೋವಿ ಎಂಬುವವರಿಗೆ ಮಂಗಳವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮನೆಯವರು ಅಥಣಿಯ ತಾಲೂಕು ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ರಾತ್ರಿ 11 ಗಂಟೆ ಸುಮಾರಿಗೆ ಭೋವಿ ದಂಪತಿಗಳಿಗೆ ಗಂಡು ಮಗುವಿನ ಜನನವಾಗುತ್ತದೆ. ಹೀಗಾಗಿ ಮನೆಮಂದಿಯೆಲ್ಲ ಸಂತೋಷದಿಂದ ಸಂಭ್ರಮಿಸುತ್ತಾರೆ. ಆದರೆ ಆ ಸಂಭ್ರಮ ಬಹಳ ಹೊತ್ತು ಇರೋದಿಲ್ಲ. ಬುಧವಾರ ಬೆಳಗಿನ ಜಾವ ಹೆರಿಗೆ ವಾರ್ಡ್ಗೆ  ನರ್ಸ್ ವೇಶದಲ್ಲಿರೋ ನವಜಾತ ಶಿಶು ಕಳ್ಳಿ ಎಂಟ್ರೀ ಕೊಡ್ತಾಳೆ. ನರ್ಸ್ ವೇಶದಲ್ಲಿರೋ ಕಳ್ಳಿ ನಿಮ್ಮ ಮಗುವಿನ ತೂಕ ಚೆಕ್ ಮಾಡಲಾಗಿದೆಯೇ ಎಂದು ಬಾಣಂತಿಯ ತಾಯಿಯನ್ನು ಮಾತಿಗೆ ಎಳೆಯುತ್ತಾರೆ.

ಅಮೀತ ಬೋವಿ – ಮಗು ಕಣೆಯಾದ ತಂದೆ

ಇನ್ನು ಮಗುವಿನ ತೂಕ ಚೆಕ್ ಮಾಡಿಲ್ಲ ಅಂದಾಗ, ನಾವೇ ತೂಕ ಮಾಡಿಕೊಂಡು ಬರುವುದಾಗಿ ತಿಳಿಸಿ ಬಾಣಂತಿ ಮಡಿಲಿನಂದ ಮಗುವನ್ನು ತೆಗೆದುಕೊಂಡು ಹೋಗುತ್ತಾರೆ. ಎಷ್ಟೋತ್ತಾದರೂ ಮಗುವನ್ನ ತೆಗೆದುಕೊಂಡ ಹೋದ ನರ್ಸ್ ವಾಪಸ್ಸು ಬರದಿದ್ದಾಗ ಗಲಿಬಿಲಿಗೊಂಡ ಬಾಣಂತಿ ಕಡೆಯವರು ಆಸ್ಪತ್ರೆ ಸಿಬ್ಬಂದಿಗಳಿಗೆ ತಿಳಿಸಿದಾಗ ನರ್ಸ್ ವೇಶದಲ್ಲಿರೋ ಇಬ್ಬರು ಮಹಿಳೆಯರು ನವಜಾತ ಶಿಶುವನ್ನ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಮಗು ಕಳ್ಳತನ ಮಾಡಿದ ಎರಡುವರೆ ಘಂಟೆಯಲ್ಲಿ ಮಗು ಕಳ್ಳತನ ಮಾಡಿದ ಆರೋಪಿಯನ್ನ ಬಂಧಿಸುವಲ್ಲಿ ಅಥಣಿ‌ ಪೋಲಿಸರು‌ ಯಶಶ್ವಿಯಾಗಿದ್ದು ಅಪರಾಧಿ ಬಂಧಿಸುವಲ್ಲಿ ಭಾಗವಹಿಸಿದ ಪೋಲಿಸರಿಗೆ ಪೋಲಿಸ ಇಲಾಖೆ 20,000 ಧನ ಸಹಾಯ ನೀಡಿದೆ ಎಂದು ಬೆಳಗಾವಿ ಪೋಲಿಸ್ ವರಿಷ್ಠಾಧಿಕಾರಿ‌ ಸಂಜೀವ ಪಾಟೀಲ ಮಾಹಿತಿ‌ ನೀಡಿದರು.