ಉ.ಕ ಸುದ್ದಿಜಾಲ ರಾಮನಗರ :

ಆರ್ಕಿಟೆಕ್ಟ್ ಓದುತ್ತಿದ್ದ ಯುವಕ ಮುಂದಿನ ವಿದ್ಯಾಭ್ಯಾಸಕ್ಕೆ ಯುಎಸ್ ನಲ್ಲಿ ಅವಕಾಶ ದೊರೆಯಲಿಲ್ಲ ಎಂದು ನೇಣಿಗೆ ಶರಣಾಗಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ನಡೆದಿದೆ.

ಮಾಗಡಿ ಪಟ್ಟಣದ ಯುವಕ ಸಾಯಿ ಸನ್ವಿತ್ (23) ಆತ್ಮಹತ್ಯೆ ಮಾಡಿಕೊಂಡ ದುದ್ರೈವಿ. ಮನನೊಂದು ಡೆತ್ ನೋಟ್ ಬರೆದಿಟ್ಟು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುಎಸ್ ನಲ್ಲಿ ಕನ್ ಸ್ಟ್ರಕ್ಷನ್ ಮ್ಯಾನೇಜ್ ಮೆಂಟ್ ನ ವಿದ್ಯಾಭ್ಯಾಸಕ್ಕಾಗಿ ಹೋಗಬೇಕಾಗಿದ್ದ ಯುವಕ.

ಪಾಸ್ ಪೋರ್ಟ್ ನಲ್ಲಿ ಹೆಸರು ಸರಿಯಾಗಿ ನಮೂದಿಸದ ಕಾರಣ ಮೇಲ್ ಬಂದಿಲ್ಲ ಎಂಬ ಮಾಹಿತಿ. ಮರಣೋತ್ತರ ಪರೀಕ್ಷೆಗಾಗಿ ಮಾಗಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ದೇಹ ರವಾನೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು