ಉ.ಕ ಸುದ್ದಿಜಾಲ ವಿಜಯಪುರ :

ಭಾಗಪ್ಪ ಹರಿಜನ್ ಹತ್ಯೆ ಪ್ರಕರಣ. ಬಾಗಪ್ಪ ಹಂತಕರು ಪೊಲೀಸ್ ಕಸ್ಟಡಿಗೆ. 5 ದಿನಗಳ ಕಾಲ ಗಾಂಧಿಚೌಕ ಪೊಲೀಸರ ವಶಕ್ಕೆ ನೀಡಿದ ನ್ಯಾಯಾಲಯ. 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಎರಡನೇ ಹೆಚ್ಚುವರಿ ಜಿಲ್ಲಾ ವಿಶೇಷ ನ್ಯಾಯಾಲಯದಿಂದ ಆದೇಶ.

ಹೆಚ್ಚಿನ ವಿಚಾರಣೆ ಹಿನ್ನೆಲೆ ತಮ್ಮ ಕಸ್ಟಡಿಗೆ ಪಡೆದ ಗಾಂಧಿಚೌಕ ಪೊಲೀಸರು. ಬಂಧಿತ ಆರೋಪಿಗಳ ಆರೋಗ್ಯ ತಪಾಸಣೆ ನಡೆಸಿ ನ್ಯಾಯಾಧೀಶರ ಎದುರು ಹಾಜರು. ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ. ಆರೋಪಿಗಳನ್ನ ಆಸ್ಪತ್ರೆ ಕರೆ ತಂದ‌ ಗಾಂಧಿಚೌಕ್ ಪೊಲೀಸರು…

ಪ್ರಕಾಶ್ ಅಲಿಯಾಸ್ ಪಿಂಟು, ರಾಹುಲ್, ಸುದೀಪ್ ಹಾಗೂ ಮಣಿಕಂಠ ಆರೋಗ್ಯ ತಪಾಸಣೆ. ಆರೋಗ್ಯ ತಪಾಸಣೆ ಬಳಿಕ ನ್ಯಾಯಾಲಯಕ್ಕೆ ಆರೋಪಿತರನ್ನು ಕರೆದುಕೊಂಡು ಹೋದ ಪೊಲೀಸರು.

ವಿಜಯಪುರ ಜಿಲ್ಲಾ ಎರಡನೇ ಹೆಚ್ಚುವರಿ ಮತ್ತು ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಪೊಲೀಸ್ ಕಸ್ಟಡಿಗೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.