ಬೆಳಗಾವಿ :

ವಿಧಾನ ಪರಿಷತ್ ಚುನಾವಣೆ ಘೋಷಣೆ ಬಳಿಕ  ರಾಜಕೀಯ ಚಟುವಟಿಕೆ ಗರಿಗೆದರಿದೆ. ಟಿಕೆಟ್‌ಗಾಗಿ ಕಾಂಗ್ರೆಸ್ ನಾಯಕರಲ್ಲಿ ಈಗಿನಿಂದಲೇ ಫೈಟ್ ಶುರುವಾಗಿದ್ದು ಮತ್ತೊಂದು ರಣರೋಚಕ ಸ್ಪರ್ಧೆಗೆ ಪರಿಷತ್ ಚುನಾವಣೆ ಕಣ ರಂಗೇರುವ ಎಲ್ಲ ಮೂನ್ಸೂಚನೆ ಕಾಣುತ್ತಿದ್ದು ವಿಧಾನ ಪರಿಷತ ಚುನಾವಣೆಯಲ್ಲಿ ಕಾಂಗ್ರೆಸ್ ‌ನಿಂದ ಯಾರ ಸ್ಪರ್ಧೆ ಮಾಡುತ್ತಾರು ಎನ್ನುವುದು ಈಗ ಪ್ರಶ್ನೆಯಾಗಿ ಉಳದಿದೆ.

ಬೆಳಗಾವಿಯಲ್ಲಿ ಯಾವುದೇ ಚುನಾವಣೆ ನಡೆದ್ರೂ ಕೂಡ ಸೋಲು ಗೆಲುವಿನ ಲೆಕ್ಕಾಚಾರಕ್ಕಿಂತ ಅದು ಪ್ರತಿಷ್ಠೆಯ ಚುನಾವಣೆ ಕಣವಾಗಿ ಮಾರ್ಪಡುತ್ತೆ. ಮೊನ್ನೆಯಷ್ಟೇ ನಡೆದ ಮಹಾನಗರ ಪಾಲಿಕೆಯಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಹೆಡೆಮುರೆಕಟ್ಟಲು ಕಾಂಗ್ರೆಸ್ ಸಿದ್ದತೆ ನಡೆಸಿದೆ. ಇತ್ತ ಲೋಕಸಭಾ ಉಪ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದ ಕಾಂಗ್ರೆಸ್ ಈ ಬಾರಿ ಗೆಲ್ಲಲು ನಾನಾ ತಂತ್ರಗಳನ್ನ ರೂಪಿಸುತ್ತಿದೆ. ಡಿ.10 ರಂದು ಕರ್ನಾಟಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆ ದಿನಾಂಕ ಘೋಚಣೆಯಾಗಿದ್ದೆ ತಡ ಕುಂದಾನಗರಿಯಲ್ಲಿ ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಘಟಾನು ಘಟಿ ನಾಯಕರು ಟಿಕೆಟ್ ಕೇಳುತ್ತಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಸಹೋದರ ಚನ್ನರಾಜ್ ಹಟ್ಟಿಹೋಳಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರಿಗೆ ಕಳೆದ ಬಾರಿ‌ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೇಳಿ ಕಡೆ ಘಳಿಗೆಯಲ್ಲಿ ಟಿಕೆಟ್ ತಪ್ಪಿತ್ತು ಆದ್ರೇ ಈ ಬಾರಿ ಟಿಕೆಟ್ ನೀಡಲೇಬೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಟಿಕೆಟ್ ಗಾಗಿ ಲಾಬಿ ನಡೆಸಿದ್ದಾರೆ. ಇತ್ತ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಕೂಡ ಟಿಕೆಟ್ ಕೇಳುತ್ತಿದ್ದು ಈಗಾಗಲೇ ವರಿಷ್ಠರಿಗೆ ಭೇಟಿಯಾಗಿ ವಿಧಾನಪರಿಷತ್ ಟಿಕೆಟ್ ನೀಡಿ ಅಂತಾ ಮನವಿ ಮಾಡಿಕೊಂಡಿದ್ದಾರಂತೆ. ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕರಾದ ವೀರಕುಮಾರ್ ಪಾಟೀಲ್, ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ, ವಿ.ಎಸ್ ಸಾಧುನವರ್, ಡಾ.ಎನ್ ಎ ಮಗದುಮ್, ಮಾಜಿ ಶಾಸಕ ಡೊಂಗರಗಾಂವ ಸೇರಿ ಐದು ಜನಕ್ಕೂ ಹೆಚ್ಚು ಅಕಾಂಕ್ಷಿಗಳು ಈಗಾಗಲೇ ಟಿಕೆಟ್ ಗಾಗಿ ಲಾಬಿಯನ್ನ ನಡೆಸುತ್ತಿದ್ದಾರೆ.

ಮಾಜಿ ಸಂಸದ ಪ್ರಕಾಶ ಹುಕ್ಕೇರಿ

ಚಿಕ್ಕೋಡಿ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಈಗಾಗಲೇ ಟಿಕೆಟ್ ನೀಡುವಂತೆ ಹೈಕಮಾಂಡ್ ಹಾಗೂ ಬೆಳಗಾವಿ ಕಾಂಗ್ರೆಸ್ ನಾಯಕರಿಗೆ ಕೇಳಿದ್ದೇನೆ. ಏಕೆಂದರೆ ನಾನೊಬ್ಬ ಕೆಲಸಗಾರ ನಾನೂ ಶಾಸಕನಾಗಿ, ಸಂಸದನಾಗಿ ಕೆಲಸ ಮಾಡಿದ ಅನುಭವವಿದೆ. ಈಗಾಗಲೇ ನನಗೆ ಜನರು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಎಂದು ಹೇಳುತ್ತಲೆ ಇದ್ದಾರೆ. ನನಗೆ  ಅವಕಾಶ ಕೊಟ್ರೇ ಈ ಬಾರಿ ಸ್ಥಳೀಯ ಸಂಸ್ಥೆ ಚುನಾವನೆಗೆ ನಾನು ಸ್ಪರ್ಧೆ ಮಾಡುತ್ತೇನೆ. ಈಗಾಗಗಲೇ ನಮ್ಮ ನಾಯಕರಿಗೆ ಸ್ಪರ್ಧೆ ಮಾಡುವ ವಿಚಾರ ತಿಳಿಸಿದ್ದೇನೆ ಎಂದು ಹೇಳಿದರು.

ಲಕ್ಷ್ಮೀ ಹೆಬ್ಬಾಳ್ಕರ ಸಹೋದರ ಚನ್ನರಾಜ ಹಟ್ಟಿಹೋಳಿ

ಇತ್ತ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಸಹೋದರ ಚನ್ನರಾಜ ಹಟ್ಟಿಹೋಳಿ ನಾನು ವಿಧಾನ ಪರಿಷತ್ ಚುನಾವಣೆ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ 6 ತಿಂಗಳಿನಿಂದ ಪರಿಷತ್ ಚುನಾವಣೆ ತಯಾರಿ ಆರಂಭಿಸಿದ್ದೇನೆ. ಜಿಲ್ಲೆಯ 14 ತಾಲೂಕಿನಲ್ಲಿ ಪ್ರವಾಸ ಮಾಡಿ ನನ್ನ ಬೆಂಬಲಿಸುವಂತೆ ಹೇಳಿದ್ದೇನೆ. ಹೀಗಾಗಿ ನಾನೂ ಕೂಡಾ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನೀಡುವಂತೆ ಅರ್ಜಿ ಸಲ್ಲಿಸಿದ್ದೇನೆ. ನಮ್ಮ ನಾಯಕರಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ ಹಾಗೂ ಸತೀಶ ಜಾರಕಿಹೊಳಿ ಅವರ ನಿರ್ಣಾಯಕ್ಕೆ ಬದ್ದನಾಗಿದ್ದೇನೆ ಎನ್ನುತ್ತಾರೆ ಲಕ್ಷ್ಮೀ ಹೆಬ್ಬಾಳ್ಕರ ಸಹೋದರ ಚನ್ನರಾಜ ಹಟ್ಟಿಹೋಳಿ.

ಒಟ್ಟಾರೆ ವಿಧಾನ ಪರಿಷತ್ ಚುನಾವಣೆ ದಿನಾಂಕ  ಘೋಷಣೆ ಆಗಿದ್ದೆ ತಡ ಕಾಂಗ್ರೆಸ್‌ನಲ್ಲಿ  ಟಿಕೆಟ್ ಆಕಾಂಕ್ಷಿಗಳು ಪಟ್ಟಿ ಹೆಚ್ಚುತ್ತಲೆ ಹೋಗುತ್ತಿದೆ. ಈ ಬಾರಿ ಘಟಾನುಘಟಿ ನಾಯಕರೇ ಟಿಕೆಟ್ ಕೇಳುತ್ತಿದ್ದು ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಲಿದೆ. ಇದನ್ನ ಹೇಗೆ ಬಗೆಹರಿಸಿ ಚುನಾವಣೆ ಗೆಲ್ಲಲು ಪಕ್ಷದ ವರಿಷ್ಠರು ತಂತ್ರ ರೂಪಿಸುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.