ಬಾಗಲಕೋಟೆ :

ಟಿಪ್ಪು ಒಬ್ಬ ಮಹಾನ್ ಮತಾಂಧ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಿಸಲ್ಲ. ಒಣಕೆ ಓಬವ್ವನ ಜಯಂತಿ ಮಾಡಲು ತಯಾರಿದ್ದೇವೆ. ಆದರೆ, ಈ ರಾಜ್ಯದಲ್ಲಿ ಟಿಪ್ಪು ಜಯಂತಿ ಮಾಡಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ ಹೇಳಿದರು‌.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ

ಬಾಗಲಕೋಟೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ‌ಅವರು, ಬೇಕಿದ್ರೆ ನಾವು ಅಬ್ದುಲ್ ಕಲಾಂ, ಸಂತ ಶಿಶುನಾಳ ಶರೀಪ್ ಅವರ ಜಯಂತಿ ಮಾಡ್ತೇವೆ. ಟಿಪ್ಪು ಸುಲ್ತಾನ ಒಬ್ಬ ಮತಾಂದ, ದೇಶದ್ರೋಹಿ  ದೇಶದಲ್ಲಿ ಲಕ್ಷಾಂತರ ಸಾಮಾನ್ಯ ಜನರನ್ನ ಮತಾಂತರ ಮಾಡಿದ್ದಾರೆ. ದೇವಸ್ಥಾನ ದ್ವಂಸ ಮಾಡಿರುವ ಹಿಂದು ವಿರೋಧಿ ಎಂದು ಹೇಳಿದರು.