ಅಥಣಿ :

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದ್ದು ಆರು ವರ್ಷದ ಬಾಲಕ‌ ಕೇವಲ 60 ಸೆಕೆಂಡುಗಳಲ್ಲಿ 305 ಕರಾಟೆ ಪಂಚ್ ಗಳನ್ನು ಮಾಡುವುದರ ಮೂಲಕ ವಿಶ್ವ ದಾಖಲೆ ಬರೆದಿದ್ದು, ಮತ್ತಷ್ಟು ಕರ್ನಾಟಕದ ಕೀರ್ತಿ ಹೆಚ್ವಿಸಿದ್ದಾನೆ ಆ ಪುಟ್ಟ ಬಾಲಕ.‌

ಹೀಗೆ ಕರಾಟೆ ಪಂಚ ಹೊಡೆಯುತ್ತಿರುವ ಆರು ವರ್ಷದ ಬಾಲಕನ ಹೆಸರು ಸುಶೀಲಕುಮಾರ ವಿವೇಕ ಹೆಗಡೆ ಅಂತಾ ಈ ಬಾಲಕನೆ ಕರಾಟೆಯಲ್ಲಿ ವಿಶ್ವದಾಖಲೆ ನಿರ್ಮಾಣ ಮಾಡಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ ಅಥಣಿ ಪಟ್ಟಣದ ಕೀರ್ತಿ ಹೆಚಿಸಿದ್ದು ಚಿಕ್ಕ ವಯಸ್ಸಿಗೆ ಸಾಧನೆ ಮಾಡುವುದರ ಮೂಲಕ‌ ಇತರರಿಗೆ ಈ ಬಾಲಕ ಸ್ಪೂರ್ತಿಯಾಗಿದ್ದಾನೆ. ಈ ಬಾಲಕನಿಗೆ ಅಥಣಿಯ ಕರಾಟೆ ತರಬೇತುದಾರ ಮೋಹನಸಿಂಗ್ ರಜಪೂತ ಮಾರ್ಗದರ್ಶನ ನೀಡಿದ್ದು ದಿನಂಪ್ರತಿ‌ ಸುಮಾರು ಎರಡು ಗಂಟೆ ತರಬೇತಿ ನೀಡುವುದರ ಮೂಲಕ ಸುಶೀಲ‌ಕುಮಾರ ಸಾಧನೆಗೆ ದಾರಿ ಮಾಡಿಕೊಟಿದ್ದಾರೆ. ಇತನ ಸತತ ಪ್ರಯತ್ನ, ಸಿನಿಯರ್ಸ‌ಗಳ ಸಪೊರ್ಟ ಹಾಗೂ ತಂದೆ ತಾಯಿಯ ಅತಿಯಾದ ಪ್ರೀತಿ ಹಾಗೂ ಬೆಂಬಲದಿಂದ ಇಂದು ಸುಶೀಲಕುಮಾರ ಸಾಧನೆ ಮಾಡುವುದರ ಮೂಲಕ‌ ತಂದೆ ತಾಯಿಯ ಕೀರ್ತಿ ಹೆಚ್ವಿಸಿದ್ದಾನೆ ಸುಶೀಲಕುಮಾರ. ಇನ್ನೂ ಗಿನಿಸ್ ದಾಖಲೆ ಮಾಡಲು‌ ಮುಂದಾಗಿದ್ದು ಮತಷ್ಟು ತರಬೇತಿ‌ ಪಡೆದು ರಾಜ್ಯದ ಹಾಗೂ ದೇಶದ ಕೀರ್ತಿ ಹೆಚ್ವಿಸಲು‌ ಮುಂದಾಗಿದ್ದಾನೆ ಆರು ವರ್ಷದ ಬಾಲಕ‌ ಸುಶೀಲಕುಮಾರ

ವಿಶ್ವ ದಾಖಲೆ ಮಾಡಿರುವ 6 ವರ್ಷದ ಬಾಲಕ – ಸುಶೀಲಕುಮಾರ

ಈ ಹಿಂದೆ ಇದೆ ರೀತಿ 254 ಪಂಚ್ ಮಾಡಿದ್ದ ಗೋವಾದ 35 ವರ್ಷದ ಯುವಕನ ದಾಖಲೆಯನ್ನು ಇವತ್ತು ಅಥಣಿಯಲ್ಲಿ ಕೇವಲ 06 ವರ್ಷದ ಅಥಣಿಯ ಬಾಲಕ ಸುಶೀಲಕುಮಾರ ಹೆಗಡೆ ಮುರಿದು ಎಲ್ಲರೂ ನಿಬ್ಬೆರಗಾಗುವಂತೆ ಅದ್ಬುತ ಸಾಧನೆ ಮಾಡಿ ಸಮಸ್ತ ಅಥಣಿ ಜನತೆ ಸೇರಿದಂತೆ ಇಡೀ ಕರ್ನಾಟಕ‌ ಹೆಮ್ಮೆ ಪಡುವಂತೆ ಮಾಡಿದ್ದಾನೆ.‌  ಈ ಹಿಂದೆ ಮಾಡಿರುವ ದಾಖಲೆಯನ್ನು ಇತನು ಇವತ್ತು ಮುರಿದು ವಿಶ್ವದಾಖಲೆ ಮಾಡಿರುವುದು ನಮ್ಮೆಲ್ಲರಿಗೆ ಹೆಮ್ಮೆಯಾಗಿದೆ ಇನ್ನು ಈತನಿಂದ ಗಿನ್ನಿಸ್ ಬುಕ್ ಆಫ್ ರೆಕಾರ್ಡ ಮಾಡಿಸುವ ಪ್ರಯತ್ನ ಮಾಡುತ್ತೆನೆಂದು ತರಬೇತುದಾರ ಮೋಹನಸಿಂಗ್ ರಜಪೂರ ಅವರು ಹರ್ಷ ವ್ಯಕ್ತಪಡಿಸಿದರು.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದನ್ನು ಇಂದು ಸುಶೀಲಕುಮಾರ ತೊರಿಸಿಕೊಟ್ಟಿದ್ದು ಕರಾಟೆಯಲ್ಲಿ ವಿಶ್ವ ದಾಖಲೆ ಮಾಡಿರುವದರ ಮೂಲಕ ಮತ್ತಷ್ಟು ಬೆಳಗಾವಿ ಜಿಲ್ಲೆಯ ಗರಿ ಹೆಚ್ಚಿಸಿರುವ ಕೀರ್ತಿ ಸುಶೀಲಕುಮಾರನಿಗೆ ಸಲ್ಲುತ್ತದೆ. ಈ ಬಾಲಕನ ಸಾಧನೆಯೂ ಇತರ ಬಾಲಕರಿಗೆ ಸ್ಪೂರ್ತಿಯಾಗಿದೆ‌.

ವರದಿ : ಬಸವರಾಜ ಗಿಡ್ಡೆಮಾಳಿ