ಉ.ಕ ಸುದ್ದಿಜಾಲ ಬೆಳಗಾವಿ :

ತಿನ್ನಲು ಕನ್ನಡ ಬೇಕು, ಉಳಿಯಲು ಕನ್ನಡ ಬೇಕು ಆದರೆ ಅದಕ್ಕೆ ಗೌರವ ನೀಡುವ ಸೌಜನ್ಯ ಈ ಮತಿ ಭ್ರಷ್ಟರಿಗಿಲ್ಲ.  ಹೌದು ಬೆಳಗಾವಿ ತಾಲೂಕಿನ ಕಡೋಲಿ ರಸ್ತೆಯಲ್ಲಿ (ಕಂಗ್ರಾಳಿ ಹತ್ತಿರ) ಇರುವ ಸರ್ಕಾರಿ ಕನ್ನಡ ಫಲಕಗಳಿಗೆ ನಾಡ ದ್ರೋಹಿಗಳು ಮಸಿ ಬಳಿದು ವಿಕೃತಿ ಮೆರೆದಿದ್ದಾರೆ.

ಇದುವರೆಗೂ ಕನ್ನಡಿಗರು ಕಾಲು ಕೆರೆದುಕೊಂಡು ಹೋಗಿಲ್ಲ, ಈ ಬುದ್ಧಿ ಕನ್ನಡಿಗರಿಗೆ ಬರುವುದೂ ಸಹ ಇಲ್ಲ. ಈ ಪುಂಡರಿಗೆ ಹೇಳುವುದು ಏನೆಂದರೆ ಕನ್ನಡಕ್ಕೆ ಅವಮಾನಿಸುವ ನಿಮ್ಮ ನೀಚ ಬುದ್ಧಿಯನ್ನ ನಿಮಗೆ ಬಿಡು ಎನ್ನುವುದು ಒಂದೇ, ಹಂದಿಗೆ ಹೊಲಸು ತಿನ್ನಬೇಡ ಅನ್ನುವುದು ಒಂದೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ದ್ರೋಹಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ  ಕನ್ನಡ ಪ್ರೇಮಿಗಳು.

ಕನ್ನಡ ಭಾಷೆಗೆ ಮೇಲಿಂದ ಮೇಲೆ ಆಗುತ್ತಿರುವ ಈ ಅವಮಾನಕ್ಕೆ ಸರ್ಕಾರ ಆದಷ್ಟು ಬೇಗ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಮ್ಮ ನೆಲದಲ್ಲಿ ಆಶ್ರಯ ಪಡೆದು ನಮ್ಮವರಿಗೆ ಹಾಗೂ ನಮ್ಮ ಭಾಷೆಗೆ ವಿಷ ಕಕ್ಕುವಂತಹ ಈ ವಿಷ ಜಂತುಗಳ ಸಂಖ್ಯೆ ಹೆಚ್ಚಾಗುತ್ತದೆ.

ಇದರಿಂದ ನಾಡಿನ ಶಾಂತತೆ ಕದಡುವುದಲ್ಲದೆ, ಇಂತಹ ವಿಕೃತ ಮನಸ್ಸುಗಳ ನಡುವೆ ಇದ್ದೀವಿ ಎಂಬುದನ್ನೂ ನೆನೆಸಲಾಗದು. ಇನ್ನು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳೂ ಸಹ ಇದರತ್ತ ವಿಶೇಷ ಗಮನ ಹರಿಸಬೇಕು. ನಿಮ್ಮ ಸೇವೆ ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗದಿರಲಿ. ಅತಿಯಾದರೆ ಅಮೃತವೂ ವಿಷ ಎನ್ನುವುದನ್ನು ಮರೆಯದಿದ್ದರೆ ಕ್ಷೇಮ. ಜೈ ಕನ್ನಡ, ಜೈ ಕನ್ನಡಾಂಬೆ, ಜೈ ಕರ್ನಾಟಕ ಎಂದು ಕನ್ನಡ ಪ್ರೇಮಿಗಳು ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.